Belagavi NewsBelgaum NewsCrimeKannada NewsKarnataka NewsNational

*ಯುಕೆಯಲ್ಲಿ ಉದ್ಯೋಗದ ಆಮಿಷ*: *ವೈದ್ಯರಿಗೆ ವಂಚಿಸಿದ ಗುಜರಾತ್ ಮಹಿಳೆ ವಿರುದ್ಧ ಬೆಳಗಾವಿಯಲ್ಲಿ ಪ್ರಕರಣ ದಾಖಲು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವೈದ್ಯರೊಬ್ಬರಿಂದ ₹28.15 ಲಕ್ಷ ಹಣ ಪಡೆದು ವೀಸಾ ಕೊಡಿಸದೆ, ಹಣವನ್ನೂ ಮರಳಿಸದೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಸದಾಶಿವನಗರ ನಿವಾಸಿ ವೈದ್ಯ ನಿಲೇಶಕುಮಾರ ವಂಚನೆಗೊಳಗಾದವರು. ಗುಜರಾತ್ ಮೂಲದ ಮೋಹಿನಿ ಪರ್ಸೋತ್ತಂಭಾಯಿ ಜಿಂಜಾಲಾ ಎಂಬ ಮಹಿಳೆ ವಂಚನೆ ಆರೋಪ ಎದುರಿಸುತ್ತಿದ್ದಾರೆ.

ವೈದ್ಯ ನಿಲೇಶಕುಮಾರ ಅವರ ಪತ್ನಿಯ ಸಹೋದರಿಗೆ ಯುನೈಟೆಡ್ ಕಿಂಗ್‌ಡಮ್‌ನ ವೀಸಾ ಮಾಡಿಸಿಕೊಟ್ಟು ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ, ವಿವಿಧ ಹಂತಗಳಲ್ಲಿ ಒಟ್ಟು ₹28.15 ಲಕ್ಷ ಹಣ ಪಡೆದಿದ್ದಳು. ಆದರೆ, ಭರವಸೆ ನೀಡಿದಂತೆ ವೀಸಾ ಮಾಡಿಸಿಕೊಡದೆ, ಪಡೆದ ಹಣವನ್ನೂ ವಾಪಸ್ ನೀಡಿರಲಿಲ್ಲ ಎನ್ನಲಾಗಿದೆ.

ಕಳೆದ ಒಂದು ವರ್ಷದಿಂದ ಹಣ ಹಿಂದಿರುಗಿಸುವಂತೆ ಅಥವಾ ವೀಸಾ ಕೊಡಿಸುವಂತೆ ವೈದ್ಯರು ಹಲವು ಬಾರಿ ಮನವಿ ಮಾಡಿದರೂ ಆರೋಪಿ ಸ್ಪಂದಿಸಿರಲಿಲ್ಲ. ಇದರಿಂದ ತಾವು ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದ ಹಿನ್ನೆಲೆಯಲ್ಲಿ ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಎಪಿಎಂಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Related Articles

Back to top button