Karnataka NewsLatestPolitics

*ಸ್ಟಿಂಗ್ ಕೇಸ್*: *ಕೃಪಾ ಆಳ್ವಾಗೆ ನೋಟಿಸ್ ಜಾರಿ ಮಾಡಿದ ಸಿಸಿಬಿ*

ಪ್ರಗತಿವಾಹಿನಿ ಸುದ್ದಿ: ಮಾಜಿ ಸಿಎಂ‌ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೃಪಾ ಆಳ್ವಾಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಸ್ಟಿಂಗ್ ಆಪರೇಷನ್ ಕೇಸ್ ವಿಚಾರವಾಗಿ ತನಿಖೆ ನಡೆಸುತ್ತಿರುವ ಬೆಂಗಳೂರು ಸಿಸಿಬಿ ಪೊಲೀಸರು, ಇಂದು ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾಗೆ ನೋಟಿಸ್​ ನೀಡಿದ್ದಾರೆ.

ಮೊಬೈಲ್, ಲ್ಯಾಪ್​ಟಾಪ್ ಸಮೇತ ಹಾಜರಾಗುವಂತೆ ಸೂಚಿಸಲಾಗಿದೆ. ಪೂರ್ವ ನಿಯೋಜಿತ ಟ್ರಿಪ್ ಹಿನ್ನೆಲೆಯಲ್ಲಿ ವಿದೇಶಕ್ಕೆ ತೆರಳಿದ್ದ ಕೃಪಾ ಆಳ್ವಾ, ನವೆಂಬರ್.7ರಂದು ರಾತ್ರಿ ಕೆಂಪೇಗೌಡ ಏರ್​ಪೋರ್ಟ್​ಗೆ ವಾಪಸ್​​ ಆಗಿದ್ದಾರೆ.

ಮೊದಲೇ ಕೃಪಾ ಆಳ್ವಾ ವಿರುದ್ಧ ಸಿಸಿಬಿ ಟೀಂ LOC ಜಾರಿ ಮಾಡಿದ್ದ ಹಿನ್ನೆಲೆ ಏರ್​ಪೋರ್ಟ್ ಎಮಿಗ್ರೇಷನ್ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದರು. ಬಳಿಕ ಸಿಸಿಬಿ ಸೈಬರ್ ಇನ್ಸ್​ಪೆಕ್ಟರ್ ಸತೀಶ್ ವಶಕ್ಕೆ ನೀಡಲಾಗಿತ್ತು. ಈ ನಡುವೆ ಬಂಧನ ಭೀತಿಯಲ್ಲಿದ್ದ ಕೃಪಾ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದರಿಂದ ಕೃಪಾ ಆಳ್ವ ಬಂಧನದಿಂದ ಪಾರಾಗಿದ್ದರು. ಇದೀಗ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿದೆ.


Related Articles

Back to top button