Kannada NewsKarnataka NewsLatest

*ಆಟೋ, ಕ್ಯಾಬ್, ಗೂಡ್ಸ್ ಚಾಲಕರಿಗೆ ಹೊಸ ನಿಯಮ ಜಾರಿ*

ಪ್ರಗತಿವಾಹಿನಿ ಸುದ್ದಿ: ಆಟೋ, ಕ್ಯಾಬ್, ಗೂಡ್ಸ್ ಚಾಲಕರಿಗೆ ರಾಜ್ಯ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಈ ನೂತನ ನಿಯಮವನ್ನು ಜಾರಿಗೊಳಿಸಿ ಆದೇಶ ಹೊರಡಿಸಿದೆ.

ಸರ್ಕಾರದ ಹಲವು ಯೋಜನೆಗಳ ಅಡಿಯಲ್ಲಿ ನೀಡುವ ವಾಹನಗಳಿಗೆ ಹಳದಿ-ಕೆಂಪು ಬಣ್ಣ ಕಡ್ಡಾಯ ‌ಮಾಡಿ ಆದೇಶ ಹೊರಡಿಸಲಾಗಿದೆ. ಇದಕ್ಕೆ ಆಟೋ ಮತ್ತು ಕ್ಯಾಬ್ ಚಾಲಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇನ್ಮುಂದೆ ರಾಜ್ಯ ಸರ್ಕಾರದಿಂದ ನೀಡುವ ಎಲ್ಲಾ ಮಾದರಿಯ ಆಟೋ, ಕ್ಯಾಬ್​ಗಳಿಗೆ ಸಂಪೂರ್ಣ ಹಳದಿ, ಕೆಂಪು ಬಣ್ಣವನ್ನು ಪೇಂಟಿಂಗ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಹಲವು ವರ್ಷಗಳಿಂದ ಆಟೋ, ಕ್ಯಾಬ್ ಚಾಲಕರು ಹಳದಿ, ಕೆಂಪು ಪೇಂಟಿಂಗ್ ಮಾಡಿಕೊಳ್ಳಲು ಅವಕಾಶ ಕೇಳಿದ್ದರು.

ರಾಜ್ಯ ಸರ್ಕಾರದ ಹಲವು ಯೋಜನೆಗಳ ಅಡಿಯಲ್ಲಿ ಉಚಿತವಾಗಿ ಮತ್ತು ಸಬ್ಸಿಡಿ ಆಧಾರದಲ್ಲಿ ಆಟೋ, ಕ್ಯಾಬ್ ಗಳನ್ನು ಪ್ರತಿವರ್ಷ ನೀಡುತ್ತಿದೆ. ಸಾರಥಿ ಸ್ವಾವಲಂಬಿ ಯೋಜನೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ವ ಸಂಖ್ಯಾಂತರ ನಿಗಮ ಮಂಡಳಿ, ದೇವರಾಜು ಅರಸು ನಿಗಮ ಮಂಡಳಿ, ಒಕ್ಕಲಿಗ ಅಭಿವೃದ್ಧಿ ನಿಗಮ ಮಂಡಳಿ ಅಡಿಯಲ್ಲಿ ಫಲಾನುಭವಿಗಳಿಗೆ ಆಟೋ, ಕ್ಯಾಬ್, ಗೂಡ್ಸ್ ಆಟೋ, ತಳ್ಳೊ ಗಾಡಿಗಳನ್ನು ನೀಡಲಾಗುತ್ತದೆ.

ಕರ್ನಾಟಕ ಸರ್ಕಾರದ ಯೋಜನೆಗಳಡಿ ನೀಡುವ ವಾಹನಗಳಿಗೆ ಹಳದಿ-ಕೆಂಪು ಬಣ್ಣದ ಜೊತೆಗೆ ರಾಜ್ಯ ಲಾಂಛನವನ್ನು ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕವಾಗಿ ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು, ನಿಗಮ ಮಂಡಳಿಗಳು ಮತ್ತು ಪ್ರಾಧಿಕಾರಗಳು ಈ ನಿಯಮವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಸಚಿವ ಸಂಪುಟ ಅನುಮೋದಿಸಿರುವ ವಿನ್ಯಾಸಗಳಂತೆ, ಆಯಾ ಇಲಾಖೆಗಳು ಸರಿಯಾಗಿ ಸರ್ಕಾರಿ ಬ್ರಾಂಡಿಂಗ್‌ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ.

Related Articles

Back to top button