*ಕೋರ್ಟ್ ನಲ್ಲಿ ವಿಚಾರಣೆ ವೇಳೆ ದರ್ಶನ್-ಪವಿತ್ರಾ ಗೌಡ ಮಾತುಕತೆ*: *ಚರ್ಚಿಸಿದ್ದೇನು??*

ಪ್ರಗತಿವಾಹಿನಿ ಸುದ್ದಿ: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ವಿಡಿಯೋ ಕಾನ್ಸಫರೆನ್ಸ್ ಮೂಲಕ ಆರೋಪಿಗಳು ವಿಚಾರಣೆಗೆ ಹಾಜರಾಗಿದಾರೆ.
ಪ್ರತಿ ಬಾರಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳು ವಿಡಿಯೋ ಕಾನ್ಸಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗುತ್ತಾರೆ. ಅದರಂತೆ ಇಂದೂ ಸಹ ವಿಚಾರಣೆ ವೇಳೆ ದರ್ಶನ್, ಪವಿತ್ರಾ ಸೇರಿದಂತೆ ಇತರೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ದರ್ಶನ್ ಮತ್ತು ಪವಿತ್ರಾ ಗೌಡ ಪರಸ್ಪರ ಮಾತನಾಡಿದ್ದಾರೆ.
ಇನ್ನೂ ಎಷ್ಟು ದಿನ ಹೀಗೇ ಎಂದು ಪವಿತ್ರಾ ಗೌಡ, ದರ್ಶನ್ ಅನ್ನು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ದರ್ಶನ್, ಇನ್ನೂ 4 ತಿಂಗಳಾದರೂ ಇರಬೇಕಾಗಬಹುದು ಎಂದಿದ್ದಾರೆ. ಇಲ್ಲಿ ನನಗೆ ಬಹಳ ಸಮಸ್ಯೆ ಆಗುತ್ತಿದೆ ಎಂದು ಪವಿತ್ರಾ ಗೌಡ ಹೇಳಿದ್ದಾರೆ. ಅದಕ್ಕೆ ದರ್ಶನ್, ನಮಗೂ ಸಮಸ್ಯೆ ಆಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಜೊತೆಗೆ ಏನೂ ಮಾಡಲು ಆಗುವುದಿಲ್ಲ ಸ್ಪಲ್ಪ ದಿನ ತಾಳ್ಮೆಯಿಂದ ಕಾಯಬೇಕಾಗುತ್ತದೆ, ತಾಳ್ಮೆಯಿಂದ ಇರಬೇಕು’ ಎಂದಿದ್ದಾರೆ. ಬೆನ್ನು ನೋವು ಹೇಗಿದೆ? ಎಂದು ಪವಿತ್ರಾ ಗೌಡ ಪ್ರಶ್ನೆಗೆ ಮುರಿದು ಹೋಗಿದೆ ಎಂಬಂತೆ ಸಂಜ್ಞೆ ಮಾಡಿದ್ದಾರೆ ದರ್ಶನ್.
ವಿಡಿಯೋ ಕಾನ್ಫರೆನ್ಸ್ ಕನೆಕ್ಷನ್ ತಪ್ಪಿದ್ದ ಸಂದರ್ಭದಲ್ಲಿ ದರ್ಶನ್ ಮತ್ತು ಪವಿತ್ರಾ ಪರಸ್ಪರ ಮಾತನಾಡಿದ್ದಾರೆ. ಕನೆಕ್ಷನ್ ಸರಿ ಹೋದ ಬಳಿಕ ಇಬ್ಬರೂ ಮಾತು ನಿಲ್ಲಿಸಿದ್ದಾರೆ ಎನ್ನಲಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವೇಳೆ ಇಂದು ಪ್ರತ್ಯಯಕ್ಷ ಸಾಕ್ಷಿ ಪುನೀತ್ ಎಂಬುವರ ಪಾಠಿ ಸವಾಲು ನಡೆಯುತ್ತಿದೆ. ಪುನೀತ್, ದರ್ಶನ್ರ ಆಪ್ತರಾಗಿದ್ದಾರೆ. ಇತ್ತೀಚೆಗೆ ಸಾಕ್ಷಿ ಹೇಳಿಕೆ ದಾಖಲಿಸುವಾಗ ಅವರು ಪ್ರತಿಕೂಲ ಸಾಕ್ಷಿ ನುಡಿದಿದ್ದಾರೆ. ಅಂದರೆ ಪೊಲೀಸರ ಮುಂದೆ ನೀಡಿದ್ದ ಹೇಳಿಕೆಯನ್ನು ಬದಲಾಯಿಸಿ ಬೇರೆ ಹೇಳಿಕೆ ನೀಡಿದ್ದಾರೆ. ಘಟನೆ ನಡೆದಾಗ ದರ್ಶನ್ ಮತ್ತು ಪವಿತ್ರಾ ಗೌಡ ಸ್ಥಳದಲ್ಲಿ ಇರಲಿಲ್ಲ ಎಂದಿದ್ದಾರೆ. ಈ ಕಾರಣದಿಂದಾಗಿ ಪುನೀತ್ ಅವರ ಪಾಟಿ ಸವಾಲನ್ನು ಇಂದು ಎಸ್ಪಿಪಿ ಅವರು ಮಾಡಿದ್ದಾರೆ.



