Kannada NewsLatestNationalTech

*ಬಿ.ಎಸ್.ಎನ್.ಎಲ್ ಗ್ರಾಹಕರಿಗೆ ಬಂಪರ್ ಆಫರ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (BSNL) ಗ್ರಾಹಕರಿಗೆ ಹೊಸ ಆಫರ್ ನೀಡಿದೆ. ಖಾಸಗಿ ಟೆಲಿಕಾಂ ಕಂಪನಿಗಳ ರೀಚಾರ್ಜ್ ದರಗಳ ನಡುವೆ ಕಡಿಮೆ ಖರ್ಚಿನಲ್ಲಿ ಹೆಚ್ಚು ದಿನಗಳ ವ್ಯಾಲಿಡಿಟಿ ಪಡೆಯಲು ಬಯಸುವವರಿಗೆ ಬಿಎಸ್‌ಎನ್‌ಎಲ್‌ನ ಎರಡು ಪ್ಲಾನ್‌ಗಳು ಗಮನ ಸೆಳೆಯುತ್ತಿವೆ.

ಅನಿಯಮಿತ ಕರೆಗಳು, ಪ್ರತಿದಿನ ಡೇಟಾ ಹಾಗೂ ಎಸ್‌ಎಂಎಸ್ ಸೌಲಭ್ಯಗಳೂ ಈ ಪ್ಲಾನ್‌ಗಳಲ್ಲಿವೆ. ಮೊಬೈಲ್ ರೀಚಾರ್ಜ್ ಬೆಲೆ ಏರಿಕೆಯಿಂದಾಗಿ ಪ್ರತಿ ತಿಂಗಳು ಹಣ ಖರ್ಚು ಮಾಡುವ ಗ್ರಾಹಕರಿಗೆ ದೀರ್ಘಾವಧಿಯ ಪ್ಲಾನ್‌ಗಳು ಹೆಚ್ಚು ಅನುಕೂಲಕರವಾಗಿವೆ.

ಬಿ.ಎಸ್.ಎನ್.ಎಲ್, ಈ ಹಿಂದೆ 365 ದಿನಗಳ ವ್ಯಾಲಿಡಿಟಿ ನೀಡುತ್ತಿದ್ದ ತನ್ನ ₹2,799 ಪ್ಲಾನ್‌ಗೆ ಇದೀಗ ಹೆಚ್ಚುವರಿಯಾಗಿ 30 ದಿನಗಳನ್ನು ಸೇರಿಸಿದೆ. ಅಂದರೆ ಒಂದೇ ರೀಚಾರ್ಜ್‌ನಲ್ಲಿ ಬರೋಬ್ಬರಿ 395 ದಿನಗಳ ಕಾಲ ಸಿಮ್ ಸಕ್ರಿಯವಾಗಿರಲಿದೆ. ಮತ್ತೊಂದು ₹2,449 ಪ್ಲಾನ್‌ನಲ್ಲಿ ₹1 ಲಕ್ಷದವರೆಗಿನ ಇನ್ಶೂರೆನ್ಸ್ ಸೌಲಭ್ಯವೂ ಇದೆ.

ಪ್ರತಿದಿನ ಇಂಟರ್ನೆಟ್ ಬಳಸುವವರು ಹಾಗೂ ಆಗಾಗ್ಗೆ ರೀಚಾರ್ಜ್ ಮಾಡುವುದನ್ನು ತಪ್ಪಿಸಿಕೊಳ್ಳಲು ಬಯಸುವವರಿಗೆ ಬಿಎಸ್‌ಎನ್‌ಎಲ್‌ನ ₹2,799 ಪ್ಲಾನ್ ಉತ್ತಮ ಆಯ್ಕೆಯಾಗಬಹುದು.

ಈ ಹಿಂದೆ 365 ದಿನಗಳ ವ್ಯಾಲಿಡಿಟಿ ಹೊಂದಿದ್ದ ಈ ಪ್ಲಾನ್‌ಗೆ ಈಗ ಹೆಚ್ಚುವರಿಯಾಗಿ 30 ದಿನಗಳನ್ನು ಸೇರಿಸಲಾಗಿದೆ. ಹೀಗಾಗಿ ಒಟ್ಟು 395 ದಿನಗಳ ವ್ಯಾಲಿಡಿಟಿ ಸಿಗಲಿದೆ.

ಈ ಪ್ಲಾನ್‌ ಪ್ರಯೋಜನಗಳು:

ವ್ಯಾಲಿಡಿಟಿ: 395 ದಿನಗಳು

ಪ್ರತಿದಿನ 3GB ಹೈ-ಸ್ಪೀಡ್ ಡೇಟಾ

ಅನಿಯಮಿತ ವಾಯ್ಸ್ ಕಾಲಿಂಗ್

ಪ್ರತಿದಿನ 100 SMS

ಡೇಟಾ ಮಿತಿ ಮುಗಿದ ಬಳಿಕ 40 Kbps ವೇಗದಲ್ಲಿ ಇಂಟರ್ನೆಟ್ ಬಳಕೆ.

ಒಟ್ಟು ₹2,799 ಅನ್ನು 395 ದಿನಗಳಿಗೆ ಲೆಕ್ಕ ಹಾಕಿದರೆ ದಿನಕ್ಕೆ ಸರಾಸರಿ ಕೇವಲ ₹7.09 ಖರ್ಚಾಗುತ್ತದೆ. ಈ ಹೆಚ್ಚುವರಿ ವ್ಯಾಲಿಡಿಟಿ ಆಫರ್ 2026ರ ನವೆಂಬರ್ 30ರವರೆಗೆ ಲಭ್ಯವಿರಲಿದೆ ಎಂದು ವರದಿಯಾಗಿದೆ.

ಕಡಿಮೆ ದರದಲ್ಲಿ ದೀರ್ಘಾವಧಿಯ ವ್ಯಾಲಿಡಿಟಿ ಬೇಕು ಎನ್ನುವವರಿಗೆ ₹2,449 ಪ್ಲಾನ್ ಮತ್ತೊಂದು ಆಯ್ಕೆಯಾಗಿದೆ. ಈ ಪ್ಲಾನ್‌ಗೆ 15 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ನೀಡಲಾಗಿದ್ದು, ಒಟ್ಟು 380 ದಿನಗಳವರೆಗೆ ಸಿಮ್ ಸಕ್ರಿಯವಾಗಿರಲಿದೆ.

ಇದರ ವಿಶೇಷವೆಂದರೆ ₹1 ಲಕ್ಷದವರೆಗಿನ ಇನ್ಶೂರೆನ್ಸ್ ಸೌಲಭ್ಯವೂ ಲಭ್ಯವಿದೆ.

ಈ ಪ್ಲಾನ್‌ನ ಪ್ರಯೋಜನಗಳು:

ವ್ಯಾಲಿಡಿಟಿ: 380 ದಿನಗಳು

ಪ್ರತಿದಿನ 2GB ಹೈ-ಸ್ಪೀಡ್ ಡೇಟಾ

ಅನಿಯಮಿತ ವಾಯ್ಸ್ ಕಾಲಿಂಗ್

ಪ್ರತಿದಿನ 100 SMS

₹1 ಲಕ್ಷದವರೆಗೆ ಇನ್ಶೂರೆನ್ಸ್ ಕವರ್.

ಈ ಪ್ಲಾನ್‌ನ ದಿನದ ಸರಾಸರಿ ವೆಚ್ಚ ಸುಮಾರು ₹6.44 ಆಗುತ್ತದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ದಿನಗಳ ವ್ಯಾಲಿಡಿಟಿ ಬಯಸುವವರಿಗೆ ಇದು ಗಮನಾರ್ಹ ಆಯ್ಕೆಯಾಗಿದೆ.

ದೀರ್ಘಾವಧಿಯ ಪ್ಲಾನ್‌ಗಳಷ್ಟೇ ಅಲ್ಲದೆ, ಕಡಿಮೆ ಹಣದಲ್ಲಿ ಮೊಬೈಲ್ ಸಂಪರ್ಕವನ್ನು ಸಕ್ರಿಯವಾಗಿಟ್ಟುಕೊಳ್ಳಲು ಬಯಸುವವರಿಗೂ ಬಿಎಸ್‌ಎನ್‌ಎಲ್ ಆಯ್ಕೆಗಳನ್ನು ನೀಡುತ್ತಿದೆ. ಇತ್ತೀಚೆಗೆ ₹172, ₹184 ಮತ್ತು ₹190 ಬೆಲೆಯ ಮೂರು ಹೊಸ ರೀಚಾರ್ಜ್ ಪ್ಲಾನ್‌ಗಳನ್ನು ಪರಿಚಯಿಸಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button