Kannada NewsLatestSports

*BREAKING: ಐಪಿಎಲ್ ಗೆ ನಿವೃತ್ತಿ ಘೋಷಿಸಿದ ಮಹೇಂದ್ರ ಸಿಂಗ್ ಧೋನಿ*

ಪ್ರಗತಿವಾಹಿನಿ ಸುದ್ದಿ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಲೆಜೆಂಡ್‌ ಮಹೇಂದ್ರ ಸಿಂಗ್ ಧೋನಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ಗೆ ನಿವೃತ್ತಿ ಘೋಷಿಸಿದ್ದಾರೆ.

ಐಪಿಎಲ್ ಗೆ ಎಂ.ಎಸ್.ಧೋನಿ ಗುಡ್ ಬೈ ಹೇಳಿದ್ದಾರೆ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ಫ್ರಾಂಚೈಸಿ ಖಚಿತಪಡಿಸಿದೆ. ಧೋನಿ ಅವರನ್ನು ಸಿಎಸ್‌ಕೆ ನೂತನ ಮೆಂಟರ್‌ ಆಗಿ ನೇಮಕ ಮಾಡಿಕೊಂಡಿದೆ.

ಕಳೆದ ಆವೃತ್ತಿಯಲ್ಲಿ ಧೋನಿ ಒಂದು ಪಂದ್ಯಗಳಲ್ಲಿ ಆಡಿರಲಿಲ್ಲ. ಐಪಿಎಲ್ ನಲ್ಲಿ ಚೆನ್ನೈ, ಪುಣೆ ತಂಡದ ಪರವಾಗಿ ಆಡಿದ್ದರು. ಸದ್ಯ ಸಿಎಸ್ ಕೆ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಬಾರಿಯೂ ಧೋನಿ ಒಂದು ಪಂದ್ಯಗಳಲ್ಲಿ ಆಡಿರಲಿಲ್ಲ. ಐಪಿಎಲ್ ನಲ್ಲಿ ಚೆನ್ನೈ, ಪುಣೆ ತಂಡದ ಪರವಾಗಿ ಆಡಿದ್ದರು. ಕಳೆದ 2026ರ ಆವೃತ್ತಿಯಿಂದ ಹೊರಗುಳಿದಿದ್ದ 45 ವರ್ಷದ ಧೋನಿ, ಯುವ ಆಟಗಾರರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಆಟಗಾರನಾಗಿ ತಮ್ಮ ಸುದೀರ್ಘ ಪಯಣಕ್ಕೆ ತೆರೆ ಎಳೆದಿದ್ದಾರೆ. ಈ ನಿವೃತ್ತಿ ಘೋಷಣೆಯ ಬೆನ್ನಲ್ಲೇ ಧೋನಿ ಅವರು ಸಿಎಸ್‌ಕೆ ತಂಡದ ನೂತನ ‘ಮೆಂಟರ್’ ಆಗಿ ನೇಮಕಗೊಂಡಿದ್ದಾರೆ.

ಧೋನಿ ಅವರು ಕಳೆದ ಐಪಿಎಲ್ 2026ರ ಸಂಪೂರ್ಣ ಆವೃತ್ತಿಯಿಂದ ಮೀನಖಂಡದ ಗಾಯ ಮತ್ತು ಫಿಟ್‌ನೆಸ್ ಸಮಸ್ಯೆಯಿಂದಾಗಿ ಹೊರಗುಳಿದಿದ್ದರು. ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವ ಮತ್ತು ತಂಡವನ್ನು ಭವಿಷ್ಯಕ್ಕಾಗಿ ಸಜ್ಜುಗೊಳಿಸುವ ಉದ್ದೇಶದಿಂದ, 2027ರ ಆವೃತ್ತಿಗೆ ಆಟಗಾರನಾಗಿ ಮುಂದುವರಿಯದಿರಲು ಅವರು ನಿರ್ಧರಿಸಿದ್ದಾರೆ. 2025ರ ಮೇ 25ರಂದು ಅಹಮದಾಬಾದ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯವು ಮೈದಾನದಲ್ಲಿ ಆಟಗಾರನಾಗಿ ಅವರ ಕೊನೆಯ ಪಂದ್ಯವಾಗಿ ದಾಖಲಾಗಿದೆ.

2008ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನ ಸೇರಿಕೊಂಡ ಮಹಿ ಈವರೆಗೆ ಚೆನ್ನೈ ಪರ 272 ಪಂದ್ಯಗಳನ್ನಾಡಿದ್ದಾರೆ. ನಾಯಕನಾಗಿ 5 ಬಾರಿ ಟ್ರೋಫಿ ತಂದುಕೊಟ್ಟ ದಾಖಲೆಯನ್ನೂ ಬರೆದಿದ್ದಾರೆ. 38.3 ಸರಾಸರಿಯಲ್ಲಿ 5,439 ರನ್‌ ಗಳಿಸಿದ್ದಾರೆ. ಇದರಲ್ಲಿ 264 ಸಿಕ್ಸ್‌, 24 ಅರ್ಧಶತಕಗಳೂ ಸೇರಿವೆ.

Related Articles

Back to top button