Belagavi NewsBelgaum NewsKannada NewsKarnataka NewsLatestPolitics

*ಹುಕ್ಕೇರಿ ಹಿರೇಮಠ ಸಂಸ್ಥಾನದ ಆಶೀರ್ವಾದ ಪಡೆದ ಚನ್ನರಾಜ ಹಟ್ಟಿಹೊಳಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ವಿಧಾನ ಪರಿಷತ್ತಿನ ಸದಸ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ, ಮಲಪ್ರಭಾ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರೂ ಆಗಿರುವ ಚನ್ನರಾಜ ಹಟ್ಟಿಹೊಳಿ ಅವರ ಜನ್ಮ ದಿನಾಚಾರಣೆಯ ಪ್ರಯುಕ್ತ ಬೆಳಗಾವಿ ಹುಕ್ಕೇರಿ ಹಿರೇಮಠ ಸಂಸ್ಥಾನದ ಆಶೀರ್ವಾದ ಪಡೆದರು.

ಆಶೀರ್ವಾದ ಸ್ವೀಕರಿಸಿ ಮಾತನಾಡಿದ ಚನ್ನರಾಜ ಹಟ್ಟಿಹೊಳಿ ಅವರು, ಹುಕ್ಕೇರಿ ಹಿರೇಮಠದ ಆಶೀರ್ವಾದ ನಮಗೂ ನಮ್ಮ ಮನೆತನಕ್ಕೆ ಸದಾ ಇದೆ. ಶ್ರೀಗಳ ಆಶೀರ್ವಾದದಿಂದ ನಾವು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಸಹೋದರಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಶಾಸಕರಾಗಿ, ಸಚಿವರಾಗಿ ಸೇವೆ ಮಾಡಲು ಗುರುಗಳ ಆಶೀರ್ವಾದವೂ ಕಾರಣ ಎಂದು ಸಂಸ್ಥಾನದ ಆಶೀರ್ವಾದ ಸ್ವೀಕರಿಸಿದರು.

ಹುಕ್ಕೇರಿ ಹಿರೇಮಠ ಸಂಸ್ಥಾನದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಚನ್ನರಾಜ ಹಟ್ಟಿಹೊಳಿ ಅವರು ಚಿಕ್ಕ ವಯಸ್ಸಿನಲ್ಲಿಯೇ ಉನ್ನತ ಹುದ್ದೆಯನ್ನು ಸ್ವೀಕರಿಸಿದ್ದಾರೆ. ಅವರ ಅಧಿಕಾರದ ಅವಧಿ ಜನರ ಉಪಯೋಗಕ್ಕೆ ಮೀಸಲಾಗಿರಲಿ ಎಂದು ಶುಭವನ್ನು ಹಾರೈಸಿದರು. ಸಂಗೊಳ್ಳಿ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಭದ್ರೇಶ್ವರನ ಕೃಷೆ ಇವರ ಮನೆತನಕ್ಕೆ ಸದಾ ಇರಲಿ ಎಂದರು.

ಸುತಗಟ್ಟಿಯ ಪಟ್ಟಾಧ್ಯಕ್ಷರು ಚನ್ನರಾಜ ಹಟ್ಟಿಹೊಳಿ ಅವರ ಸಹೋದರಿ ಸವಿತಾ, ಎಸ್.ಎಸ್.ಕಿವುಡಣ್ಣವರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

Back to top button