Kannada NewsKarnataka NewsLatest

ಕೆಎಚ್ ಬಿ ಕಾಲೋನಿಗೆ 6 ಕೋಟಿ ರೂ. ಅನುದಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ದೇವರಾಜ ಅರಸ ಕಾಲೋನಿಯಲ್ಲಿರುವ ಕೆ.ಹೆಚ್.ಬಿ ಕಾಲೋನಿಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಪ್ರಕ್ರಿಯೆ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು.

ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಕಾಲೋನಿ ರಹವಾಸಿಗಳ ಬಹು ವರ್ಷಗಳ ಬೇಡಿಕೆಯನ್ನು ನೆರವೇರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ದೇವರಾಜ ಅರಸ ಕಾಲೋನಿಯ ಕೆ.ಹೆಚ್.ಬಿ ಕಾಲೋನಿಯಲ್ಲಿನ ಮೂಲಭೂತ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ಗಟಾರ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತವಾಗಿತ್ತು.

Home add -Advt

ಬಹುವರ್ಷಗಳಿಂದ ಅಭಿವೃದ್ಧಿಯನ್ನೇ ಕಾಣದ ಕಾಲೋನಿಯನ್ನು  ಕ್ಷೇತ್ರದ ಅಭಿವೃದ್ಧಿಯ ಮುತವರ್ಜಿಯಿಂದ  ಕಾಲೋನಿಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಯಿತು. ಇದರಿಂದ ಕಾಲೋನಿಯನ್ನು ಅಭಿವೃದ್ಧಿಗೊಳಿಸಲು ಅನುಕೂಲಕರವಾಗಿದೆ ಹಾಗೂ ಕಾಲೋನಿಯ ಅಭಿವೃದ್ಧಿಗಾಗಿ ೬ ಕೋಟಿ ರೂಗಳನ್ನು ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ. ಹೆಚ್‌. ರವರಿಗೆ ಚೆಕ್‌ನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ  ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ. ಹೆಚ್, ಕೆ.ಹೆಚ್.ಬಿ ಸಹಾಯಕ ಅಭಿಯಂತರ ಗುರವ, ಜಲ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಚಂದ್ರಪ್ಪ ಹಾಗೂ ಎಲ್ಲ ರಹವಾಸಿಗಳು ಉಪಸ್ಥಿತರಿದ್ದರು.

 

Related Articles

Back to top button