Kannada NewsKarnataka NewsLatest

ತುರ್ತು ಸಭೆ ನಡೆಸಿದ ಗಣೇಶ ಹುಕ್ಕೇರಿ: 5 ಸಾವಿರ ಮಾಸ್ಕ ವಿತರಣೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಕೊರೊನಾ ವೈರಸ್ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದರಿಂದ ಮುಂಜಾಗೃತ ಕ್ರಮವಾಗಿ ಚಿಕ್ಕೋಡಿ-ಸದಲಗಾ  ಶಾಸಕ  ಗಣೇಶ ಹುಕ್ಕೇರಿ ತುರ್ತು ಸಭೆ ನಡೆಸಿದರು.

 ಸದಲಗಾ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಈ ಸಭೆಯಲ್ಲಿ ಪಟ್ಟಣದಲ್ಲಿ  ಆಗಬಹುದಾದ  ಸಮಸ್ಯೆಗಳನ್ನು  ಆಲಿಸಿ ಅದಕ್ಕೆ ಪರಿಹಾರ ಸೂಚಿಸಿದರು. ಯಾವುದೇ ಕಾರಣದಿಂದ ಜನರು ಪ್ಯಾನಿಕ್ ಆಗದಂತೆ ಮತ್ತು ಎಲ್ಲ ರೀತಿಯ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

Home add -Advt

 ತಾವೇ ಸ್ವತಃ ಉಚಿತವಾಗಿ 5000 ಮಾಸ್ಕಗಳನ್ನು ನೀಡಿ ಆಶಾ ಕಾರ್ಯಕರ್ತರು ಹಾಗೂ ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ  ಸಾರ್ವಜನಿಕರಿಗೆ ವಿತರಿಸಬೇಕೆಂದು ತಿಳಿಸಿದರು.

ಈ ಸಭೆಯಲ್ಲಿ ತಾಲೂಕಾ ಆರೋಗ್ಯಧಿಕಾರಿ ಡಾ. ಶಿಂಧೆ , ಪಟ್ಟಣದ ಎಲ್ಲ ವೈದ್ಯರು ಮತ್ತು ಪುರಸಭೆ ಸದಸ್ಯರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button