Latest

ಕುಡಿದ ಅಮಲಿನಲ್ಲಿ ಪತ್ನಿ ಹಾಗೂ ಮಗಳಿಗೆ ಬೆಂಕಿಯಿಟ್ಟು, ತಾನೂ ಬೆಂಕಿ ಹಚ್ಚಿಕೊಂಡ ಪಾಪಿ

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಒಂದೆಡೆ ರಾಜ್ಯದ ಮೂಲೆ ಮೂಲೆಗಳಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮುದುವರೆಸಿದ್ದರೆ, ಇನ್ನೊಂದೆಡೆ ಲಾಕ್ ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಮದ್ಯಪ್ರಿಯರು ಮನಸೋ ಇಚ್ಛೆ ಮದ್ಯ ಸೇವನೆ ಮಾಡಿ ಹೆಂಡತಿ ಮಕ್ಕಳ ಮೇಲೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಪತ್ನಿ ಹಾಗೂ ಮಗಳಿಗೆ ಬೆಂಕಿ ಹಚ್ಚಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಗುಡಿಸಾಗರ ಗ್ರಾಮದ ಭೀರಪ್ಪ ಕಟಿಗಾರ (40) ಕೃತ್ಯ ಎಸೆಗಿದ ವ್ಯಕ್ತಿ. ಕುಡಿದ ಅಮಲಿನಲ್ಲಿ ಪತ್ನಿ ಹಾಗೂ ಮಗಳಿಗೂ ಬೆಂಕಿ ಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡು ತೀವ್ರ ಗಾಯಗೊಂಡಿದ್ದ. ಗಂಭೀರವಾಗಿ ಗಾಯಗೊಂದಿದ್ದ ಮೂವರನ್ನೂ ಹುಬ್ಬಳ್ಲಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Home add -Advt

ಭೀರಪ್ಪ ಹಾಗೂ ಆತನ ಪತ್ನಿ ಫಕೀರವ್ವ (34) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 12 ವರ್ಷದ ಮಗಳ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಮದ್ಯ ಸೇವಿಸಿ ಮನೆಗೆ ಬಂದಿದ್ದ ಭೀರಪ್ಪ ಹಾಗೂ ಪತ್ನಿ ನಡುವೆ ಜಗಳವಾಗಿದ್ದು, ಕೋಪಗೊಂಡ ಆರೋಪಿ ಪೆಟ್ರೋಲ್ ಸುರಿದು ಪತ್ನಿ ಹಾಗೂ ಮಗಳಿಗೆ ಬೆಂಕಿ ಹಚ್ಚಿದ್ದಾನೆ. ಅಷ್ಟೇ ಅಲ್ಲದೆ ತಾನೂ ಬೆಂಕಿ ಹಚ್ಚಿಕೊಂಡಿದ್ದ. ಇದನ್ನು ನೋಡಿದ ನೆರೆಹೊರೆಯವರು ಬೆಂಕಿ ನಂದಿಸಿ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.

Related Articles

Back to top button