Latest

ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿಪ್ರರ ಪಾತ್ರ ಮಹತ್ವವಾದುದು -ಮುನವಳ್ಳಿ

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನಗರದ ವಿಪ್ರ ಬಳಗವು ಗಣೇಶಪುರದಲ್ಲಿರುವ ಗಣೇಶ ಮಂಗಲ ಕಾರ‍್ಯಾಲಯದಲ್ಲಿ ತನ್ನ 2ನೇ ವಾರ್ಷಿಕೋತ್ಸವ ಹಮ್ಮಿಕೊಂಡಿತ್ತು.
ಮಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಸಿ. ಜಿ. ಮುನವಳ್ಳಿ ಮಾತನಾಡುತ್ತ, ವಿಪ್ರ ಸಮಾಜವು ಭಾರತ ಸ್ವತಂತ್ರ ಪಡೆಯುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು. ತನ್ನದೇ ಆದ ಮಹತ್ತರವಾದ ಸ್ಥಾನಮಾನಗಳನ್ನು ಕಾಯ್ದುಕೊಂಡು ಬಂದಿದೆ. ನಂತರ ಕೆಲ ಕಾರಣಗಳಿಂದ ಆರ್ಥಿಕ ತೊಂದರೆಗಳನ್ನು ಅನುಭವಿಸಿದರೂ ಎಂದೂ ದಾರಿ ತಪ್ಪದೆ ನ್ಯಾಯ ಮಾರ್ಗದಿಂದ ಬದುಕಿದ ಸಮಾಜವಿದು ಎಂದು ಹೇಳಿದರು.
ಅಧ್ಯಕ್ಷ ವೆಂಕಟೇಶ ನಾಯಕ, ಕಾರ್ಯದರ್ಶಿ ಮಹೇಶ ಕುಲಕರ್ಣಿ, ಪದಾಧಿಕಾರಿಗಳಾದ ಪ್ರಶಾಂತ ಪಾಟೀಲ, ಸಂಜೀವ ಅಂಬೇಕರ, ಕೃಷ್ಣಮೂರ್ತಿ, ಸಚಿನ ದೇಶಪಾಂಡೆ, ರವಿ ವಾಮನಾಚಾರ್ಯ ಹಾಗೂ ಎಚ್ ಎಸ್ ಕುಲಕರ್ಣಿ ಉಪಸ್ಥಿತರಿದ್ದರು. ಸಂಗೀತ, ನೃತ್ಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button