Latest

ರಾಜ್ಯದ ಶಕ್ತಿ ಕೇಂದ್ರಕ್ಕೂ ಹರಡಿದ ಕೊರೊನಾ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ರಾಜ್ಯದ ಶಕ್ತಿಕೇಂದ್ರ ವಿಧಾನಸೌಧಕ್ಕೂ ಕೊರೊನಾ ಮಹಾಮಾರಿ ವಕ್ಕರಿಸಿದೆ. ವಿಧಾನಸೌಧದ ಸಚಿವಾಲಯ ಹಾಗೂ ಇತರೆ ಇಲಾಖೆಯ ಐದಾರು ಸಿಬ್ಬಂದಿಯಲ್ಲಿ ಕೊರೋನಾ‌ ಪಾಸಿಟಿವ್ ಕಾಣಿಸಿಕೊಂಡಿದೆ.

ಸಚಿವಾಲಯದ ಪೊಲೀಸ್‌ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ವಿಧಾನಸೌಧದ ಎ ಎಸ್ ಐ ಮಹಾಮಾರಿಗೆ ಬಲಿಯಾಗಿದ್ದಾರೆ. ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ನೌಕರರಲ್ಲಿ ಆತಂಕವುಂಟಾಗಿದ್ದು, ವಿಧಾನಸೌಧ ಹಾಗೂ ವಿಕಾಸಸೌಧದ ಎಲ್ಲ ಸಿಬ್ಬಂದಿಗೆ ಕೊವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಇಡೀ ವಿಧಾನಸೌಧಕ್ಕೆ ಸ್ಯಾನಿಟೈಸ್ ಮಾಡಲಾಗುತ್ತಿದೆ.

Home add -Advt

ಮೊದಲ ಹಂತವಾಗಿ ವಿಧಾನಸೌಧದ ಮೊದಲ ಮಹಡಿಯಲ್ಲಿ ಸ್ಯಾನಿಟೈಸ್ ಮಾಡುವ ಪ್ರಕ್ರಿಯೆ‌ ಮುಂದುವರೆದಿದೆ. ಖಾಸಗಿ ಕಂಪನಿಯ ಸುಮಾರು 20 ಕ್ಕೂ ಹೆಚ್ಚು ಸಿಬ್ಬಂದಿ‌ ಸ್ಯಾನಿಟೈಸ್ ಮಾಡುವ ಕಾರ್ಯ ಮಾಡುತ್ತಿದ್ದಾರೆ.‌

Related Articles

Back to top button