ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಿಮ್ಸ ಆಸ್ಪತ್ರೆ ಎದುರಿಗೆ ಅಂಬ್ಯುಲನ್ಸಗೆ ಬೆಂಕಿ ಇಟ್ಟು ಆಸ್ಪತ್ರೆ ಒಳಹೊಕ್ಕು ಗಲಾಟೆ ಮಾಡಿ, ಕಲ್ಲು ತೂರಾಡಿ, ಶಾಂತಿ ಕದಡಲು ಯತ್ನಿಸಿದ 14 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಸಾರಿ ಲಕ್ಷಣಗಳಿಂದ ಬಳಲುತ್ತಿರುವ ವ್ಯಕ್ತಿ ಉಪಚಾರ ಕುರಿತು ಬಿಮ್ಸ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವನು ಹೃದಯ ಸಂಬಂಧಿ ಕಾಯಿಲೆಯಿಂದಲೂ ಬಳುತ್ತಿದ್ದನು. ಕೋವಿಡ್ ಪರೀಕ್ಷೆಯ ನಂತರ ಆತನಿಗೆ ಕೋವಿಡ್ ಇದ್ದ ಬಗ್ಗೆ ದೃಢಪಟ್ಟಿದ್ದರಿಂದ ಕೋವಿಡ್ ವಾರ್ಡನಲ್ಲಿ ಆತನಿಗೆ ಉಪಚಾರ ನೀಡಲಾಗುತ್ತಿತ್ತು.
ಉಪಚಾರದಲ್ಲಿದ್ದಾಗ ಬುಧವಾರ ತೀವ್ರ ಉಸಿರಾಟದ ತೊಂದರೆಯಿಂದಾಗಿ ರೋಗಿಯು ಮೃತನಾಗಿದ್ದ. ಆತನ ಸಾವಿನ ಸುದ್ದಿ ತಿಳಿದ ತಕ್ಷಣ ಆತನ ಸಂಬಂಧಿಕರು ಸುಮಾರು ೧೫-೨೦ ಜನರು ದ್ವಿಚಕ್ರ ವಾಹನದ ಮೇಲೆ ಬೀಮ್ಸ ಆಸ್ಪತ್ರೆಗೆ ಬಂದು ಗಲಾಟೆ, ಕಲ್ಲು ತೂರಾಟ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕಲ್ಲುಗಳನ್ನು ತೂರಿ ಗಾಯ ಪಡಿಸಿದ್ದಲ್ಲದೇ, ಅಲ್ಲಿಯೇ ನಿಂತಿದ್ದ ಅಂಬ್ಯೂಲೆನ್ಸ ವಾಹನಕ್ಕೆ ಬೆಂಕಿ ಹಚ್ಚಿ, ಇನ್ನೊಂದು ಅಂಬ್ಯುಲನ್ಸ, ಒಂದು ಪೊಲೀಸ್ ವಾಹನ, ಒಂದು ಹಿಂಡಲಗಾ ಕಾರಾಗೃಹದ ವಾಹನ ಹಾಗೂ ೨ ಖಾಸಗಿ ಕಾರುಗಳಿಗೂ ಸಹ ಕಲ್ಲುಗಳನ್ನು ತೂರಿದ್ದರು.
ಈ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಇಲ್ಲಿಯವರೆಗ ೨ ವಾಹನ ಜಪ್ತ ಮತ್ತು ಸುಮಾರು ೧4 ಜನರನ್ನು ವಶಕ್ಕೆ ಪಡೆದುಕೊಂಡು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ. ಪ್ರಕರಣದಲ್ಲಿಯ ಇನ್ನುಳಿದ ಆರೋಪಿತರ ಪತ್ತೆ ಮತ್ತು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬೆಳಗಾವಿ ಹಿಂಸಾಚಾರ ಪೂರ್ವಯೋಜಿತವೇ?
ಬೆಳಗಾವಿ ಆಸ್ಪತ್ರೆ ಎದುರು ಹಿಂಸಾಚಾರ: ಬೆಂಕಿ, ಕಲ್ಲು ತೂರಾಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ