Karnataka News

*ಹಸುವಿನ ಮೇಲೆ ಆಸಿಡ್, ಕಾದ ಎಣ್ಣೆ ಸುರಿದ ಕಿಡಿಗೇಡಿಗಳು*

ಪ್ರಗತಿವಾಹಿನಿ ಸುದ್ದಿ: ಹಸುವಿನ ಮೇಲೆ ಆಸಿಡ್ ಹಾಗೂ ಕಾದ ಎಣ್ಣೆ ಎರಚಿ ಕಿಡಿಗೇಡಿಗಳು ವಿಕೃತಿ ಮೆರೆದಿರುವ ಘಟನೆ ಕೋಲಾರ ಜಿಲ್ಲೆಯ ರೆಹಮತ್ ನಗರದಲ್ಲಿ ನಡೆದಿದೆ.

ಹಸುವಿನ ಹೊಟ್ಟೆ, ಬೆನ್ನು, ಮೂಗಿನ ಮೇಲೆ ಆಸಿಡ್ ಹಾಗೂ ಕಾದ ಎಣ್ಣೆ ಎರಚಿ ಅಮಾನವೀಯವಾಗಿ ನಡೆದುಕೊಂಡಿದ್ದು, ಮೂಕ ಪ್ರಾಣಿಯ ರೋಧನೆ ಕರುಳು ಹಿಂಡುವಂತಿದೆ.

Home add -Advt

ರಸ್ತೆಯಲ್ಲಿ ತನ್ನ ಪಾಡಿಗೆ ಹೋಗುತ್ತಿದ್ದ ಹಸುವಿನ ಮೇಲೆ ಕಿಡಿಗೇಡಿಗಳು ಆಸಿಡ್, ಕಾದ ಎಣ್ಣೆ ಎರಚಿದ್ದಾರೆ. ಹಸುವಿನ ಚರ್ಮ ಸುಟ್ಟು ಗಂಭೀರ ಗಾಯವಾಗಿದ್ದು, ರಸ್ತೆಯಲ್ಲಿಯೂ ರಕ್ತ ಸೋರುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಕಿಡಿಗೇಡಿಗಳನ್ನು ಪತ್ತೆ ಮಾಡಿ ಶಿಕ್ಷೆ ನೀಡುವಂತೆ ಬಜರಂಗದ ಕಾರ್ಯಕರ್ತರು ಗಲ್ ಪೇಟೆ ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ.

Related Articles

Back to top button