ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಜಿಲ್ಲೆಯ ಚರ್ಮೋದ್ಯಮದ ಎಲ್ಲ ಸಂಘಟನೆಗಳು ಈಗ ಒಂದಾಗಿದ್ದು ಶ್ರೀ ಸಂತ ರೋಹಿದಾಸ ಹರಳಯ್ಯ ಚರ್ಮಕಾರ ಸಮಾಜ ಸುಧಾರಣೆ ಮಹಾಮಂಡಳವಾಗಿ ಏರ್ಪಟ್ಟಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಹಾಮಂಡಳದ ರಾಜ್ಯಾಧ್ಯಕ್ಷ ಶಿವಾನಂದ ಮಗದುಮ್, ರಾಜ್ಯದಲ್ಲಿ 40ಲಕ್ಷ ಜನಸಂಖ್ಯೆ ಹೊಂದಿರುವ ಚರ್ಮಕಾರರು ಬೆಳಗಾವಿ ಜಿಲ್ಲೆ ಮತ್ತು ನಗರದಲ್ಲಿ ಸೇರಿ ಸುಮಾರು 2.10ಲಕ್ಷ ಪಸರಿಸಿದ್ದಾರೆ.
ಚರ್ಮಕಾರರ ಒಗ್ಗಟ್ಟು ಮತ್ತು ಸಂಸ್ಕ್ರತಿ ಪಸರಿಸಲು ಫೆ. 15ರಂದು ನಗರದ ಚನ್ನಮ್ಮ ವೃತ್ತದಿಂದ ಶಹಾಪುರ ನಾಥಪೈ ಸರ್ಕಲ್ ವರೆಗೆ ಸಂತ ರೋಹಿದಾಸರ ಭವ್ಯ ಜಾಥಾ, ಮೆರವಣಿಗೆ ನಡೆಸಲಾಗುವುದು ಎಂದರು.
ನಗರದ ಕಾಕತಿವೆಸ್, ಶಹಾಪುರ, ಗಣೇಶಪುರ, ಅನಗೋಳ, ಮಾರುತಿ ಗಲ್ಲಿ, ಖಾಸಭಾಗ, ಪಾಟೀಲ ಗಲ್ಲಿ ಮತ್ತು ಮುಖ್ಯವಾಗಿ ಇಡೀ ಕ್ಯಾಂಪ್ ಪ್ರದೇಶದ ಚರ್ಮ ಕೈಗಾರಿಕೆ ಈಗ ಒಂದಾಗಿದ್ದು ತಮ್ಮ ಏಳ್ಗೆಯ ಬಗ್ಗೆ ವಿಚಾರವೇದಿಕೆಯಾಗಿ 25ಕಾರ್ಯಕರ್ತರ ಮಹಾ ಮಂಡಲ ಹುಟ್ಟಿಕೊಂಡಿದೆ ಎಂದರು.
ಚರ್ಮಕಾರರ ಬದುಕು ಮೊದಲಿನಂತಿಲ್ಲ, ಆಧುನಿಕ ಭರಾಟೆಯಲ್ಲಿ ಚರ್ಮ ಗುಡಿಕೈಗಾರಿಕೆ ನಶಿಸಿ ಹೋಗಿದೆ. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದ ನಮ್ಮ ಸಮಾಜಕ್ಕೆ ನಮ್ಮಲ್ಲಿ ಇಂದಿನವರೆಗೆ ಇಲ್ಲದಿದ್ದ ಒಗ್ಗಟ್ಟೇ ಕಾರಣ ಎಂದರು.
ಲಿಡಕರ ಸಂಸ್ಥೆ ಚರ್ಮಕಾರರ ಸಂಸ್ಥೆಯಾದರೂ ಅದರಿಂದ ಸಮಾಜಕ್ಕೆ ಹೆಚ್ಚಿನ ಅನುಕೂಲತೆ ಇಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲಾಧ್ಯಕ್ಷ ರವಿ ಕೇಶವ ಶಿಂಧೆ, ವಿಜಯ ನಾರಾಯಣ ಜಾಧವ, ಸಾಗರ ಲಾಟೆ, ಮಚ್ಛೆಂದ್ರ ಕಾಂಬಳೆ, ಸಿದ್ಧಾರೂಢ ಬನ್ನಿಗಿಡದ, ಶಿವರಾಜ ಸೌದಾಗರ, ಸದಾನಂದ ಕದಂ, ಸಂಜಯ ಪವಾರ, ತುಕಾರಾಮ ಶಿಂಧೆ, ಉಜ್ವಲ ಬೂಧನೂರ, ಶ್ರೀನಾಥ ಬೆಳವಡಿ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ