Kannada NewsKarnataka NewsLatest

ಸಿಇಟಿ ಪರೀಕ್ಷೆಯಲ್ಲಿ ಮಹೇಶ್ ಕಾಲೇಜಿಗೆ 723ನೇ ರ‍್ಯಾಂಕ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಮಹೇಶ ಪಿ ಯು ಕಾಲೇಜಿನ ವಿದ್ಯಾರ್ಥಿ ಚಿರಂತನ ಹೆಬ್ಬಾಳೆ ಕರ್ನಾಟಕ ರಾಜ್ಯ ಸಿ ಇ ಟಿ ಪರೀಕ್ಷೆಯಲ್ಲಿ ೭೨೩ ನೇ ರ‍್ಯಾಂಕ್ ಪಡೆದಿದ್ದಾನೆ.
ಸ್ಥಳೀಯ ಎಸ್ ಜಿ ವಿ ಮಹೇಶ ಪಿಯು ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶದಲ್ಲೂ ನಿರಂತರವಾಗಿ ಉಲ್ಲೇಖನೀಯ ಸಾಧನೆಗಳನ್ನು ಕಳೆದ ಏಳೆಂಟು ವರ್ಷಗಳಿಂದಲೂ ಮಾಡುತ್ತ ಬಂದಿದೆ. ಅದರ ಸಾಧನೆಯ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆ.

ವಿದ್ಯಾರ್ಥಿಯ ಸಾಧನೆಗೆ ಎಸ್ ಜಿ ವಿ ಮಹೇಶ ಪಿಯು ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಸಂಸ್ಥೆಯ ಎಲ್ಲ ಸಿಬ್ಬಂದಿ ಅಭಿನಂದಿಸಿದ್ದಾರೆ.

Home add -Advt

ಇಲ್ಲಿಯ ಮಹಾಂತೇಶ ನಗರದಲ್ಲಿ ಸುಸಜ್ಜಿತ ಕಟ್ಟಡ ಹಾಗೂ ಮೂಲಭೂತ ಸೌಲಭ್ಯಗಳೊಂದಿಗೆ ಕಳೆದ 8 ವರ್ಷಗಳಿಂದ ನೈಜ ಮೌಲಿಕ ಶಿಕ್ಷಣ ನೀಡುತ್ತಿರುವ ಮಹೇಶ್ ಪಿಯು ಕಾಲೇಜು ಈಗ ಬೆಳಗಾವಿ, ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಕೂಡ ಮನೆ ಮಾತಾಗಿದೆ. ಈಗ 2020-21ನೇ ಸಾಲಿನ ಪಿಯುಸಿ ಪ್ರವೇಶ ಕೂಡ ಭರದಿಂದ ನಡೆಯುತ್ತಿದೆ.

Related Articles

Back to top button