ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗ್ರಾಮೀಣ ವಿಧಾನಸಭಾ ಕ್ಷೇತ್ರದ ಕಂಗ್ರಾಳಿ ಬಿ ಕೆ ಗ್ರಾಮದಲ್ಲಿ ರೂರಲ್ ಅರ್ಬನ್ ಮಿಶನ್ ಯೋಜನೆಯಡಿಯಲ್ಲಿ ಸಿ ಸಿ ರಸ್ತೆಯ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅಧಿಕೃತವಾಗಿ ಚಾಲನೆ ನೀಡಿದರು.
1.38 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆಯ ಕಾಮಗಾರಿ ನಡೆಯಲಿದೆ. ಈ ರಸ್ತೆಯು ಸುಮಾರು 3.50 ಕಿಮೀಗಳಷ್ಟು ಉದ್ದವನ್ನು ಹಾಗೂ ಸರಾಸರಿ 3.75 ಮೀ. ಅಗಲದೊಂದಿಗೆ ಒಟ್ಟು 35 ಗಲ್ಲಿಗಳನ್ನು ಒಳಗೊಂಡಿದೆ. ರಸ್ತೆಯ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಹಾಗೂ ನಿಗದಿತ ಸಮಯದಲ್ಲಿ ಮುಕ್ತಾಗೊಳ್ಳಬೇಕೆಂದು ಗುತ್ತಿಗೆದಾರರಿಗೆ ಲಕ್ಷ್ಮಿ ಹೆಬ್ಬಾಳಕರ್ ಸೂಚನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಗ್ರಾಮಸ್ಥರು, ಗ್ರಾಮ ಪಂಚಾಯತ್ ಅಧ್ಯಕ್ಷ ದತ್ತಾ ಪಾಟೀಲ, ಯುವರಾಜ ಕದಂ, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಅರುಣ ಕಟಾಂಬಳೆ, ಪಿಡಬ್ಲೂಡಿ ಇಂಜಿನಿಯರ್ ಖಾನಾಪೂರೆ, ಅನಿಲ ಪಾವಸೆ, ಜಯರಾಂ ಪಾಟೀಲ, ಉಮೇಶ ಪಾಟೀಲ, ಕಾರ್ಯಕರ್ತರು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.
ಮರಗಾಯಿ ಮತ್ತು ಸಂತಾಜೀ ಗಲ್ಲಿಗಳಲ್ಲಿ ಪೂಜೆ ನೇರವೇರಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ