Kannada NewsKarnataka NewsLatest

ಅಪರಿಚಿತ ವಾಹನ ಡಿಕ್ಕಿ: 40ಕ್ಕೂ ಹೆಚ್ಚು ಕುರಿಗಳ ಸಾವು

 ಪ್ರಗತಿವಾಹಿನಿ ಸುದ್ದಿ, ಸವದತ್ತಿ:  ತಾಲೂಕಿನ ಹಿರೆಉಳ್ಳಿಗೇರಿ ಗ್ರಾಮದ ಹತ್ತಿರ ಸವದತ್ತಿ ಧಾರವಾಡ ಮುಖ್ಯ ರಸ್ತೆಯ ಮೇಲೆ ಅಪರಿಚಿತ ವಾಹನ ಹಾಯ್ದು ಸುಮಾರು ೪೦ಕ್ಕಿಂತಲೂ ಹೆಚ್ಚು ಕುರಿಗಳು ಮೃತಪಟ್ಟಿದ್ದು, ೪೦ಕ್ಕೂ ಅಧಿಕ ಕುರಿಗಳು ಗಾಯಗೊಂಡ ಘಟನೆ ರವಿವಾರ ಬೆಳಗಿನ ಜಾವ ಸಂಭವಿಸಿದೆ.
ಕುರಿಗಳ ಹಿಂಡು ಸವದತ್ತಿ ಕಡೆಯಿಂದ ಹಿರೇಉಳ್ಳಿಗೇರಿ ಗ್ರಾಮದ ಕಡೆಗೆ ಹೂರಟಿದ್ದವೆನ್ನಲಾಗಿದೆ. ಈ ಕುರಿಗಳು ಬೈಲಹೊಂಗಲ ತಾಲೂಕಿನ ಹೊಳಿನಾಗಲಾಪುರ ಗ್ರಾಮದ ಯಲ್ಲಪ್ಪ ಬೀಜನ್ನವರ ಎಂಬುವವರಿಗೆ ಸೇರಿದ್ದು, ಅತಿವೇಗದಿಂದ ಆಗಮಿಸಿದ ವಾಹನ ಕುರಿಗಳ ಹಿಂಡಿನ ಮೇಲೆ ಹರಿದು ಹೋಗಿದೆ ಎನ್ನುತ್ತಾನೆ ಯಲ್ಲಪ್ಪ ಬೀಜನ್ನವರ.

ಘಟನೆಯಲ್ಲಿ ಸ್ಥಳದಲ್ಲಿಯೇ ೪೦ ಕುರಿಗಳು ಸತ್ತಿದ್ದು, ಗಾಯಗೊಂಡ ಕುರಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆ ಸವದತ್ತಿ ಪೊಲೀಸ್ ಠಾಣೆಯ ಸಿ.ಪಿ.ಐ ಮಂಜುನಾಥ ನಡುವಿನಮನಿ ಘಟನಾಸ್ಥಳಕ್ಕೆ ಭೇಟಿನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೂಂಡಿದ್ದಾರೆ.

Home add -Advt

Related Articles

Back to top button