ಎಂ.ಕೆ.ಹೆಗಡೆ, ಬೆಳಗಾವಿ – ರಾಷ್ಟ್ರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನದಲ್ಲಿ ಬೆಳಗಾವಿಯೇ ಕರ್ನಾಟಕದಲ್ಲಿ ನಂಬರ್ 1. ಕರ್ನಾಟಕದಲ್ಲಿ ಯೋಜನೆ ಅನುಷ್ಠಾನ ಶೇ.18.87 ಇದ್ದರೆ ಬೆಳಗಾವಿಯಲ್ಲಿ 35.91. ರಾಜ್ಯದ ಸರಾಸರಿಗಿಂತ ಬಹುತೇಕ ಎರಡುಪಟ್ಟು.
ಕರ್ನಾಟಕದ 7 ನಗರಗಳು ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿವೆ. ರಾಜ್ಯಕ್ಕೆ ತಲಾ ಒಂದು ಸಾವಿರ ಕೋಟಿ ರೂ. ಎಂದಿದ್ದರೂ ಆಡಳಿತಾತ್ಮಕ ವೆಚ್ಚ ಕಳೆದು ಒಟ್ಟಾರೆ 6117.57 ಕೋಟಿ ರೂ. ಮಂಜೂರಾಗಿದೆ. ಇವುಗಳಲ್ಲಿ 2340 ಕೋಟಿ ರೂ. ಬಿಡುಗಡೆಯಾಗಿದ್ದು, 1154.46 ಕೋಟಿ ರೂ. ವೆಚ್ಚವಾಗಿದೆ. 310.9 ಕೋಟಿ ರೂ.ಗಳ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟಾರೆ ಬೆಳವಣಿಗೆ ಶೇ.18.87.
ಬೆಳಗಾವಿಗೆ 909.41ಕೋಟಿ ರೂ. ಮಂಜೂರಾಗಿದೆ. ಇವುಗಳಲ್ಲಿ 396 ಕೋಟಿ ರೂ. ಬಿಡುಗಡೆಯಾಗಿದೆ. ಈವರೆಗೆ 290.67 ಕೋಟಿ ರೂ. ಖರ್ಚಾಗಿದೆ. 66.48 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದ್ದು, ಇದು ಶೆ.35.91ರಷ್ಟು ಬೆಳವಣಿಗೆಯಾಗಿದೆ. ಇದು ರಾಜ್ಯದಲ್ಲೇ ಅತ್ಯಧಿಕ.
ಇನ್ನು ತುಮಕೂರು 2ನೇ ಸ್ಥಾನದಲ್ಲಿದೆ. ತುಮಕೂರಿನಲ್ಲಿ ಶೇ.28.05 ರಷ್ಟು ಬೆಳವಣಿಗೆಯಾಗಿದೆ. ತುಮಕೂರಿಗೆ 909.34 ಕೋಟಿ ರೂ. ಮಂಜೂರಾಗಿದ್ದು 307 ಕೋಟಿ ರೂ. ಬಿಡುಗಡೆಯಾಗಿದೆ. ಇವುಗಳಲ್ಲಿ 255.03 ಕೋಟಿ ರೂ. ಖರ್ಚಾಗಿದೆ. 170.74 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದೆ.
ದಾವಣಗೆರೆಯಲ್ಲಿ ಶೇ.24.60ರಷ್ಟು ಅನುಷ್ಠಾನವಾಗಿದೆ. ದಾವಣಗೆರೆಗೆ 841.35 ಕೋಟಿ ರೂ. ಮಂಜೂರಾಗಿದ್ದು, 396 ಕೋಟಿ ರೂ. ಬಿಡುಗಡೆಯಾಗಿದೆ. 207.01 ಕೋಟಿ ರೂ. ಈವರೆಗೆ ಖರ್ಚಾಗಿದೆ. 34.96 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದೆ.
ಶಿವಮೊಗ್ಗಕ್ಕೆ846.25 ಕೋಟಿ ರೂ. ಮಂಜೂರಾಗಿದ್ದು, 307 ಕೋಟ ರೂ. ಬಿಡುಗಡೆಯಾಗಿದೆ. ಇವುಗಳಲ್ಲಿ 142.72 ಕೋಟಿ ರೂ. ಖರ್ಚಾಗಿದ್ದು, 10.71 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದೆ. ಒಟ್ಟಾರೆ ಶೇ.16.86ರಷ್ಟು ಕಾಮಗಾರಿ ಅನುಷ್ಠಾನವಾಗಿದೆ.
ಹುಬ್ಬಳ್ಳಿ- ಧಾರವಾಡದ್ದೆ 920.36 ಕೋಟಿ ರೂ. ಮಂಜೂರಾಗಿದ್ದು, 386 ಕೋಟಿ ರೂ. ಬಿಡುಗಡೆಯಾಗಿದೆ. 125.20 ಕೋಟಿ ರೂ. ಖರ್ಚಾಗಿದ್ದು, 15.91 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದೆ. ಶೇ.13.60ರಷ್ಟು ಅನುಷ್ಠಾನವಾದಂತಾಗಿದೆ.
ಮಂಗಳೂರಿನ 871.96 ಕೋಟಿ ರೂ. ಮಂಜೂರಾಗಿದ್ದು, 338 ಕೋಟಿ ರೂ. ಬಿಡುಗಡೆಯಾಗಿದೆ. ಈವರೆಗೆ 93 ಕೋಟಿ ರೂ. ಖರ್ಚಾಗಿದೆ. 12.82 ಕೋಟಿ ರೂ. ಕಾಮಗಾರಿ ಪೂರ್ಣಗೊಂಡಿದೆ. ಶೇ.10.67ರಷ್ಟು ಅನುಷ್ಠಾನವಾದಂತಾಗಿದೆ.
ಕಾಮಗಾರಿ ಅನುಷ್ಠಾನದಲ್ಲಿ ರಾಜ್ಯದಲ್ಲೇ ಅತ್ಯಂತ ಹಿಂದುಳಿದ ನಗರ ರಾಜಧಾನಿ ಬೆಂಗಳೂರು. ಬೆಂಗಳೂರಿಗೆ ಸ್ಮಾರ್ಟ್ ಸಿಟಿ ಯೋಜನೆ 3ನೇ ಹಂತದಲ್ಲಿ ಮಂಜೂರಾಗಿದೆ. ಬೆಂಗಳೂರಿಗೆ 919.17 ಕೋಟಿ ರೂ. ಮಂಜೂರಾಗಿದ್ದು, 210 ಕೋಟಿ ರೂ. ಬಿಡುಗಡೆಯಾಗಿದೆ. ಕೇವಲ 40.83 ಕೋಟಿ ರೂ ಖರ್ಚಾಗಿದ್ದು, ಶೇ.4.44ರಷ್ಟು ಅನುಷ್ಠಾನವಾಗಿದೆ. ಯಾವುದೇ ಕಾಮಗಾರಿಯೂ ಈವರೆಗೆ ಮುಕ್ತಾಯ ಕಂಡಿಲ್ಲ.
ಪ್ರವಾಹ ಮತ್ತು ಕೊರೋನಾದಿಂದಾಗಿ ರಾಜ್ಯದ ಎಲ್ಲ ನಗರಗಳಲ್ಲಿ ಕಾಮಗಾರಿಗೆ ಅಡ್ಡಿ ಉಂಟಾಗಿತ್ತು. ಬೆಳಗಾವಿಯಲ್ಲಿ ಕಳೆದ ಜನೆವರಿ, ಫೆಬ್ರವರಿ ಹೊತ್ತಿಗೆ ವೇಗ ಪಡೆದಿದ್ದ ಕಾಮಗಾರಿ ಮಾರ್ಚ ಅಂತ್ಯದ ವೇಳೆಗೆ ಕೊರೋನಾದಿಂದಾಗಿ ಹಠಾತ್ ಸ್ಥಗಿತವಾಗಿತ್ತು. ಅಲ್ಲಿಂದ ಈವರೆಗೂ ಕೊರೋನಾ ಮತ್ತು ಮಳೆಯಿಂದಾಗಿ ಕಾಮಗಾರಿ ಬಹುತೇಕ ನಿಂತೇ ಹೊಗಿತ್ತು. ಈಗ ಮತ್ತೆ ಹಳಿಗೆ ಬರುತ್ತಿದೆ. ಕಾಮಗಾರಿ ವೇಗ ಪಡೆದಿದೆ.
ಈ ಡಿಸೆಂಬರ್ ಹೊತ್ತಿಗೆ ಬೆಳಗಾವಿಯ ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಬೆಳವಣಿಗೆಯನ್ನು ಗುರುತಿಸಬಹುದು ಎನ್ನುತ್ತಾರೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ