Latest

ಪತ್ನಿಯ ತಲೆಯನ್ನೇ ಕಡಿದು ತಂದ ಪತಿ

ಪ್ರಗತಿವಾಹಿನಿ ಸುದ್ದಿ; ಲಕ್ನೋ: ಪತಿ-ಪತ್ನಿಯ ನಡುವಿನ ಜಗಳ ಘೋರ ತಿರುವು ಪಡೆದುಕೊಂಡಿದ್ದು, ಕೋಪದ ಬರದಲ್ಲಿ ಪಾಪಿ ಪತಿಯೊಬ್ಬ ತನ್ನ ಪತ್ನಿಯ ಶಿರಚ್ಛೇಧನ ಮಾಡಿ ರುಂಡ ಕೈಯಲ್ಲಿ ಹಿಡಿದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ಉತ್ತರ ಪ್ರದೇಶದ ಬಾಂಡಾದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಚಿನ್ನಾರ್ ತನ್ನ ಪತ್ನಿ ತಲೆ ಕಡಿದು ಕೈಯಲ್ಲಿ ಹಿಡಿದು ಠಾಣೆಗೆ ಬರುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯ ವೈರಲ್ ಆಗಿದೆ.

Home add -Advt

ಕ್ಷುಲ್ಲಕ ಕಾರಣಕ್ಕೆ ಪತಿ ಪತ್ನಿಯ ನಡುವೆ ಜಗಳ ಆರಂಭವಾಗಿದೆ. ಕೋಪದ ಬರದಲ್ಲಿ ಪತ್ನಿಯ ರುಂಡವನ್ನೇ ಕತ್ತರಿಸಿಬಿಟ್ಟಿದ್ದಾನೆ ದುರುಳ ಪತಿ. ಕೃತ್ಯದ ಬಳಿಕ ತಲೆಯನ್ನು ಹಿಡಿದುಕೊಂಡು ಬಾಬೆರು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಗಿ ಎಸ್ ಪಿ ಮಹೇಂದ್ರ ಪ್ರತಾಪ್ ತಿಳಿಸಿದ್ದಾರೆ.

Related Articles

Back to top button