Latest

ವಂಚನೆ ಪ್ರಕರಣ; ಶಾಸಕನಿಗಿಲ್ಲ ಜಾಮೀನು

ಪ್ರಗತಿವಾಹಿನಿ ಸುದ್ದಿ; ಕಾಸರಗೋಡು: ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದೀನ್ ಸಲ್ಲಿಸಿದ್ದ ಜಾಮಿನು ಅರ್ಜಿಯನ್ನು ಹೊಸದುರ್ಗ ನ್ಯಾಯಾಲಯ ತಳ್ಳಿಹಾಕಿದೆ.

ಕಾಸರಗೋಡಿನಲ್ಲಿ ವಿವಿಧ ಠಾಣೆಗಳಲ್ಲಿ ಶಾಸಕ ಕಮರುದ್ದೀನ್ ವಿರುದ್ಧ 109 ವಂಚನೆ ಪ್ರಕರಣ ದಾಖಲಾಗಿದ್ದು, ಶಾಸಕ ಕಮರುದ್ದೀನ್ ಪಾಲುದಾರರಾಗಿರುವ ಚಿನ್ನಾಭರಣ ಸಂಸ್ಥೆ ಮುಂಗಡ ಹಣ ಪಡೆದು ಬಳಿಕ ವಾಪಸ್ ನೀಡಿಲ್ಲ ಎನ್ನಲಾಗಿದೆ. ಅಲ್ಲದೇ ಶಾಸಕರ ವಿರುದ್ಧ 13 ಕೋಟಿ ರೂ ಹಣ ಸಂಗ್ರಹಿಸಿರುವ ಆರೋಪ ಕೇಳಿಬಂದಿದೆ.

Home add -Advt

ಇನ್ನು ಕಮರುದ್ದೀನ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಕೈಬಿಡುವಂತೆ ಕೋರಿ ಕೇರಳ ಹೈಕೋರ್ಟ್ ನಲ್ಲಿ ಕೂಡ ಅರ್ಜಿಸಲ್ಲಿಸಲಾಗಿದೆ.

Related Articles

Back to top button