Latest

ಅತ್ತಿಗೆಯನ್ನೇ ಬರ್ಬರವಾಗಿ ಹತ್ಯೆಗೈದ ತಂಗಿಯ ಗಂಡ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಿಳೆಯೊಬ್ಬಳನ್ನು ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಆರೋಪಿ ಬಳಿಕ ಚಾಕುವಿನಿಂದ ತಾನೂ ಚುಕ್ಕಿಕೊಂಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿನಗರದ ಮನೆಯಲ್ಲಿ ನಡೆದಿದೆ.

ಕೊಲೆಯಾದ ಮಹಿಳೆ ಲಾವಣ್ಯ(37) ಎಂದು ತಿಳಿದುಬಂದಿದೆ. ಕೊಲೆಯಾದ ಲಾವಣ್ಯಳ ತಂಗಿಯ ಗಂಡ ವಿಜಯ್ ಕುಮಾರ್ ಹತ್ಯೆ ಮಾಡಿರುವ ಆರೋಪಿ. ಆರೋಪಿ ವಿಜಯ್ ಕುಮಾರ್ ತನ್ನ ಪತ್ನಿ ಅಂದರೆ ಲಾವಣ್ಯಳ ತಂಗಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಲಾವಣ್ಯ ತಂಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು.

Home add -Advt

ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಆರೋಪಿ ವಿಜಯ್ ಕುಮಾರ್, ಲಾವಣ್ಯ ಮನೆಗೆ ಬಂದು ನಿನ್ನ ತಂಗಿಗೆ ನನ್ನ ಜೊತೆ ರಾಜಿ ಮಾಡಿಕೊಂಡು ಸಂಸಾರ ನಡೆಸುವಂತೆ ಹೇಳು ಎಂದು ಪೀಡಿಸಿದ್ದಾನೆ. ಇದಕ್ಕೆ ಲಾವಣ್ಯ ನಿರಾಕರಿಸಿದಾಗ ಆಕೆಯ ಮನೆಯಲ್ಲಿಯೇ ಚಾಕುವಿನಿಂದ ಲಾವಣ್ಯಳ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ಅದೇ ಚಾಕುವಿನಿಂದ ತನ್ನನ್ನು ತಾನು ಚುಚ್ಚಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನಾ ಸ್ಥಳಕ್ಕೆ ಆಗಮಿಸಿರುವ ರಾಮಮೂರ್ತಿನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Related Articles

Back to top button