Latest
ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗೆ ಹೈಕೋರ್ಟ್ ಶಾಕ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಗೆ ಹೈಕೋರ್ಟ್ ವಿಭಾಗೀಯ ಪೀಠ ಬಿಗ್ ಶಾಕ್ ನೀಡಿದ್ದು, ಸಚಿವರಾಗಲು ವಿಶ್ವನಾಥ್ ಅನರ್ಹ ಎಂಬುದನ್ನು ಪರಿಗಣಿಸಬೇಕು ಎಂದಿದೆ.
ಸಿ ಜೆ ಎ.ಎಸ್ ಓಕಾ ಹಾಗೂ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಹೆಚ್.ವಿಶ್ವನಾಥ್ ಸಚಿವರಾಗಲು ಸಂವಿಧಾನದ ಆರ್ಟಿಕಲ್ 164(1B), 361B ಅಡಿಯಲ್ಲಿ ಅನರ್ಹರಾಗಿದ್ದಾರೆ. ಅವರನ್ನು ಸಚಿವ ಸ್ಥಾನಕ್ಕೆ ಶಿಫಾರಸು ಮಾಡುವ ಮೊದಲು ಸಾಂವಿಧಾನಿಕ ವಿಚಾರವನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಮಧ್ಯಂತರ ಆದೇಶ ನೀಡಿದೆ.
ಇದೇ ವೇಳೆ ಶಾಸಕರಾದ ಎಂಟಿಬಿ ನಾಗರಾಜ್ ಹಾಗೂ ಆರ್.ಶಂಕರ್ ಸಂವಿಧಾನದಡಿ ಮರು ಆಯ್ಕೆಯಾಗಿರುವುದರಿಂದ ಇಬ್ಬರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬಹುದು ಎಂದು ಹೇಳಿದೆ.




