Kannada NewsKarnataka NewsLatest

ಮಹಾರಾಷ್ಟ್ರದಲ್ಲಿ ಮತ್ತೆ ಕೊರೋನಾ ಅಬ್ಬರ; ಒಂದೇ ದಿನ 60 ಜನರು ಬಲಿ : ಬೆಳಗಾವಿಗೆ ಆತಂಕ

ಪ್ರಗತಿವಾಹಿನಿ ಸುದ್ದಿ, ಮುಂಬೈ – ಭಾರಿ ಅಬ್ಬರದ ನಂತರ ತಣ್ಣಗಾಗಿದ್ದ ಕೊರೋನಾ ಮತ್ತೆ ಮಹಾರಾಷ್ಟ್ರವನ್ನು ಕಂಗೆಡಿಸಿದೆ. ಕಳೆದ 24 ಗಂಟೆಯಲ್ಲಿ 60 ಜನರು ಕೊರೋನಾದಿಂದ ಸಾವಿಗೀಡಾಗಿದ್ದಾರೆ. 2854 ಜನರಿಗೆ ಒಂದೇ ದಿನ ಸೋಂಕು ದೃಢಪಟ್ಟಿದೆ.

ಕೊರೋನಾ ಮತ್ತು ಪ್ರವಾಹದಿಂದಾಗಿ ಮುಂಬೈ ಮಹಾನಗರ ಸೇರಿದಂತೆ ಬಹುತೇಕ ಮಹಾರಾಷ್ಟ್ರ ರಾಜ್ಯ ಕಂಗೆಟ್ಟುಹೋಗಿತ್ತು. ಅದರಿಂದ ಇನ್ನೇನು ಚೆತರಿಕೆ ಕಾಣುತ್ತಿದೆ ಎನ್ನುವ ಹೊತ್ತಿಗೆ ಮತ್ತೆ ಕೋರೋನಾ ಅಬ್ಬರಿಸತೊಡಗಿದೆ.

ಬ್ರಿಟನ್ ನಿಂದ ಆಗಮಿಸಿರುವ 16 ಜನರು ಸೇರಿದಂತೆ 2854 ಜನರಿಗೆ ಇಂದು ಒಂದೇ ದಿನ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟೂ 19,16,236 ಜನರಿಗೆ ಕೊರೋನಾ ಸೋಂಕು ಪತ್ತೆಯಾದಂತಾಗಿದೆ. 58 ಸಾವಿರ ಸಕ್ರೀಯ ಪ್ರಕರಣಗಳಿವೆ.

ಮುಂಬೈ ಮಹಾನಗರವೊಂದರಲ್ಲೇ ಇಂದು ಒಂದೇ ದಿನ 536 ಜನರಿಗೆ ಸೋಂಕು ಪತ್ತೆಯಾಗಿದೆ. ಇಂದು 12 ಜನರು ಸಾವಿಗೀಡಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಮತ್ತೆ ಸೋಂಕು ಹೆಚ್ಚುತ್ತಿರುವುದರಿಂದ ಗಡಿಯ ಬೆಳಗಾವಿ ಸೇರಿದಂತೆ ಕರ್ನಾಟಕದಲ್ಲಿ ಆತಂಕ ಹೆಚ್ಚಿದೆ. ಎರಡೂ ರಾಜ್ಯಗಳ ಮಧ್ಯೆ ವಾಣಿಜ್ಯ ವ್ಯವಹಾರ ಹೆಚ್ಚಿಗಿದೆ. ಬಸ್ ಸಂಚಾರವು ಅತ್ಯಧಿಕವಾಗಿದೆ. ಜನರ ಓಡಾಟ ನಿರಂತರವಾಗಿರುತ್ತದೆ. ಹಾಗಾಗಿ ಗಡಿಯಲ್ಲಿ ಮತ್ತೆ ತಪಾಸಣೆ ಆರಂಭವಾದರೆ ಅಚ್ಛರಿಯಿಲ್ಲ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button