Kannada NewsLatest

ಆರ್.ಎನ್.ಶೆಟ್ಟಿ ನಿಸ್ವಾರ್ಥ ಸೇವೆ, ವಿನೂತವಾದ ಕಾರ್ಯಗಳಿಂದ ಶ್ರೇಷ್ಠ ವ್ಯಕ್ತಿಯೆನಿಸಿದರು – ಡಾ. ಪ್ರಭಾಕರ ಕೋರೆ ಸ್ಮರಣೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಒಬ್ಬ ವ್ಯಕ್ತಿ ತಾನು ಮಾಡುವ ರಚನಾತ್ಮಕ ಸೇವೆಗಳಿಂದ ದೊಡ್ಡ ವ್ಯಕ್ತಿಯಾಗುತ್ತಾನೆ ಹಾಗೂ ಜನಮಾನಸದಲ್ಲಿ ಅಮರನಾಗುತ್ತಾನೆ. ಡಾ.ಆರ್.ಎನ್.ಶೆಟ್ಟಿ ಇದಕ್ಕೆ ಉತ್ತಮ ಉದಾಹರಣೆ. ಅವರು ತಮ್ಮ ನಿಸ್ವಾರ್ಥ ಸೇವೆ, ವಿನೂತವಾದ ಕಾರ್ಯಗಳಿಂದ ಶ್ರೇಷ್ಠ ವ್ಯಕ್ತಿಯೆನಿಸಿದರು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ನುಡಿದರು.

ಬೆಂಗಳೂರಿನ ಆರ್‌ಎನ್‌ಎಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಯೋಜಿಸಿದ್ದ ಆರ್.ಎನ್.ಶೆಟ್ಟಿಯವರ ವೈಕುಂಠ ಸಮಾರಾಧನೆಯಲ್ಲಿ ಮಾತನಾಡಿದರು.
ಆರ್.ಎನ್.ಶೆಟ್ಟಿ ಶ್ರಮಜೀವಿಗಳಾಗಿದ್ದರು. ಅವರು ತಾವು ಕಂಡ ಕನಸನ್ನು ಸದಾ ನನಸಾಗಿಸಿದರು. ಬದುಕಿನ ಸವಾಲುಗಳನ್ನು ಅತ್ಯಂತ ಸಹಜವಾಗಿ, ಪ್ರೀತಿಯಿಂದ ಎದುರಿಸಿದರು. ಅದರಲ್ಲಿ ಯಶಸ್ಸನ್ನೂ ಪಡೆದರು ಎಂದು ಕೋರೆ ಹೇಳಿದರು.

Home add -Advt

ಅವರು ಸೇವೆಗೈಯದ ಕ್ಷೇತ್ರವೇ ಇಲ್ಲ. ಎಲ್ಲ ನೆಲೆಗಳಲ್ಲಿ ಶ್ರಮಿಸಿದರು. ಹೊಸದನ್ನು ನಿರ್ಮಿಸಿದರು. ಉತ್ತರದಿಂದ ದಕ್ಷಿಣದ ವರೆಗೆ ಆರ್.ಎನ್.ಶೆಟ್ಟಿ ಎಂಬ ಒಂದು ವಿನೂತನವಾದ ಬ್ರಾಂಡ್ ನಿರ್ಮಿಸಿದರು. ಕೆಎಲ್‌ಇ ಸಂಸ್ಥೆಯ ಆಸ್ಪತ್ರೆ ನಿರ್ಮಾಣದಲ್ಲಿಯೂ ಮಹತ್ವದ ಯೋಗದಾನ ನೀಡಿದ್ದನ್ನು ನಾನೆಂದು ಮರೆಯಲಾರೆ. ಅವರ ಕೊಡುಗೆ ರಾಜ್ಯಕ್ಕೆ, ದೇಶಕ್ಕೆ ಅಪಾರವಾಗಿತ್ತೆಂದು ಡಾ.ಪ್ರಭಾಕರ ಕೋರೆ ಸ್ಮರಿಸಿದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.

Related Articles

Back to top button