Kannada NewsKarnataka NewsLatest
ಬೆಂಗಳೂರಿಗೆ ಹೊರಟ ಗಡಿಬಿಡಿಯಲ್ಲೂ ಪ್ರಕಾಶ ಹುಕ್ಕೇರಿ ಮಾನವೀಯತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಾಜಿ ಸಚಿವ ಹಾಗೂ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಶುಕ್ರವಾರ ಬೆಂಗಳೂರಿಗೆ ತೆರಳುವ ಗಡಿಬಿಡಿಯಲ್ಲಿದ್ದರೂ ರಸ್ತೆಯಲ್ಲಿ ಸಂಭವಿಸಿದ ಅಪಘಾತವೊಂದರ ಗಾಯಾಳುವಿಗೆ ಮಾನವೀಯತೆ ತೋರಿಸಿದ್ದಾರೆ.
ಇಂದು ಮುಂಜಾನೆ ಚಿಕ್ಕೋಡಿ ಲೋಕಸಭಾ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಬೆಂಗಳೂರಿಗೆ ಹೋಗುತ್ತಿದ್ದರು. ಆ ವೇಳೆಯಲ್ಲಿ ಹಿರೇಬಾಗೇವಾಡಿ ಹತ್ತಿರ ಅವರ ಮುಂದೆ ಒಂದು ರಸ್ತೆ ಅಪಘಾತ ಸಂಭವಿಸಿತು.
ಅದನ್ನು ನೋಡಿದ ಅವರು ತಕ್ಷಣ ವಾಹನದಿಂದ ಇಳಿದು ಅವರ ಹತ್ತಿರ ಹೋಗಿ ಗಾಯಾಳುಗಳನ್ನು ವಿಚಾರಿಸಿದರು. ಅವರನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಕಳುಹಿಸಿ ಅವರ ಔಷಧೋಪಚಾರಕ್ಕಾಗಿ ತಮ್ಮ ಕಿಸೆಯಿಂದ 10,000 ರೂಪಾಯಿ ತೆಗೆದು ಕೊಟ್ಟು ಕಳುಹಿಸಿದರು. ನಂತರ ಅಲ್ಲಿಂದ ಬೆಂಗಳೂರಿಗೆ ತೆರಳಿದರು.




