ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಯಡಿಯೂರಪ್ಪ ಅವರ ಆಪ್ತ ಸಂತೋಷ ಆತ್ಮಹತ್ಯೆಗೆ ಯತ್ನಿಸಿದ್ದರೆನ್ನಲಾದ ಸಂದರ್ಭದಲ್ಲಿ ಕೇಳಿ ಬಂದಿದ್ದ ಸಿಡಿ ಪ್ರಕರಣ ಈಗ ಮತ್ತೊಮ್ಮೆ ಸಿಡಿದಿದೆ.
ಯಾರದ್ದೋ ಸಿಡಿಯನ್ನು ಮಾರಾಟ ಮಾಡಲು ಯತ್ನಿಸಿದ್ದರಂತೆ, ನಂತರ ಹೈಕಮಾಂಡ್ ಗೆ ತಲುಪಿಸಿದ್ದಾರಂತೆ, ಸಚಿವರೊಬ್ಬರು ಇದರ ಹಿಂದಿದ್ದಾರಂತೆ. ಆ ಹಿನ್ನೆಲೆಯಲ್ಲಿ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದರಂತೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದರು.
ನನಗೆ ಮಾಧ್ಯಮ ಸ್ನೇಹಿತರೇ ಈ ವಿಷಯ ತಿಳಿಸಿದ್ದಾರೆ ಎಂದೂ ಅವರು ಹೇಳಿದ್ದರು.
ಇದೀಗ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಮತ್ತು ಮಾಜಿ ಸಚಿವ ವಿಶ್ವನಾಥ ಸಿಡಿ ವಿಚಾರ ಮಾತನಾಡುತ್ತಿದ್ದಾರೆ. ಸಿಡಿ ಹಿಡಿದು ಬ್ಲ್ಯಾಕ್ ಮೇಲ್ ಮಾಡಿ ಒಬ್ಬರು ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ, ಮೂವರು ಮಂತ್ರಿಯಾಗಿದ್ದಾರೆ ಎಂದೂ ಯತ್ನಾಳ ಹೇಳಿದ್ದಾರೆ.
ಈ ಎರಡೂ ಘಟನೆ ಮತ್ತು ಹೇಳಿಕೆಗಳನ್ನು ತಾಳೆ ಹಾಕಿದರೆ ಒಂದಕ್ಕೊಂದು ಹೋಲಿಕೆ ಕಾಣುತ್ತದೆ. ಯತ್ನಾಳ ಮತ್ತು ವಿಶ್ವನಾಥ ಇಬ್ಬರೂ ಸಿಡಿ ಕುರಿತು ಗಟ್ಟಿಯಾದ ಧ್ವನಿಯಲ್ಲೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಬಳಿಯೂ ಸಿಡಿ ಇದೆ. ಅದರಿಂದ ಬ್ಲ್ಯಾಕ್ ಮೇಲ್ ಮಾಡುತ್ತ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಯತ್ನಾಳ ಆರೋಪಿಸಿದ್ದಾರೆ.
ಒಟ್ಟಾರೆ ಸಿಡಿ ಪ್ರಕರಣ ರಾಜ್ಯದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ