Latest

ಕಾರು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಚೋರರ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಡಿಗೆಗೆ ಕಾರು ಪಡೆದು ಕದ್ದು ಪರಾರಿಯಾಗುತ್ತಿದ್ದ ಖತರ್ನಾಕ್ ಕಳ್ಳರಿಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಗಿರೀಶ್ ಗೌಡ ಹಾಗೂ ಮೋಹನ್ ಎಂದು ಗುರುತಿಸಲಾಗಿದೆ. ಖದೀಮರು ಬರೋಬ್ಬರಿ 27 ಕಾರುಗಳನ್ನು ಕಳ್ಳತನ ಮಾಡಿದ್ದಾರೆ. ಬಂಧಿತರಿಂದ ಕದ್ದ ಹಲವು ಕಾರುಗಳು, 6 ಲಕ್ಷ ನಗದು ಹಾಗೂ 75ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.

12 ಇನ್ನೋವಾ ಕ್ರಿಸ್ತಾ, ಮಾರುತಿ ಕಂಪನಿಯ 5 ಕಾರು, ಹ್ಯುಂಡೈ ಕಂಪನಿಯ 4 ಕಾರುಗಳು, 3 ಟೊಯೊಟಾ ಫಾರ್ಚುನರ್ ಸೇರಿದಂತೆ ಒಟ್ಟು 27 ಕಾರುಗಳನ್ನು ಕದ್ದಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button