Latest

ಒಂದುವರೆ ವರ್ಷದ ಪುಟ್ಟ ಮಗು ದಾರುಣ ಸಾವು

ಪ್ರಗತಿವಾಹಿನಿ ಸುದ್ದಿ; ಮೈಸೂರು: ನಿರ್ಮಾಣ ಹಂತದಲ್ಲಿದ್ದ ಮನೆ ಮುಂದಿನ ಸಂಪಿಗೆ ಬಿದ್ದು ಒಂದುವರೆ ವರ್ಷದ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.

ಹುಣಸೂರು ತಾಲೂಕು ತೆಂಕಲಕೊಪ್ಪಲು ಗ್ರಾಮದ ನಿವಾಸಿ ನಟರಾಜ್ ಅವರ ಮಗು ದಯಾನಂದ ಮನೆ ಮುಂದೆ ಅಕ್ಕನ ಜೊತೆ ಆಟವಾಡುತ್ತಿದ್ದ. ಅಕ್ಕ ಮನೆಯೊಳಗೆ ಹೋಗಿ ಹೊರಬರುವಷ್ಟರಲ್ಲಿ ಮನೆ ಮುಂದೆ ಇದ್ದ ಕಂಡು ಬಂದಿಲ್ಲ.

Home add -Advt

ಹುಡುಕಾಟ ನಡೆಸಿದಾಗ ಮಗುವಿನ ಮೃತದೇಹ ನೀರಿನ ಸಂಪಿನಲ್ಲಿ ಪತ್ತೆಯಾಗಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Related Articles

Back to top button