Latest
ದೇಶ ಭಕ್ತಿಗೆ ಸಲಾಂ; 17,000 ಅಡಿ ಎತ್ತರದಲ್ಲಿ ತ್ರಿವರ್ಣಧ್ವಜ ಹಾರಿಸಿದ ಯೋಧರು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶಾದ್ಯಂತ ಇಂದು 72ನೇ ಗಣರಾಜ್ಯೋತ್ಸವದ ಸಂಭ್ರಮ. ದೇಶ ರಕ್ಷಣೆಗಾಗಿ ಹೋರಾಡುತ್ತಿರುವ ವೀರಯೋಧರು 17,000 ಅಡಿ ಎತ್ತರದಲ್ಲಿ ತ್ರಿವರ್ಣಧ್ವಜ ಹಾರಿಸಿ ಗಣರಾಜ್ಯೋತ್ಸವವನ್ನು ಸಂಭ್ರಮಿಸಿದ್ದಾರೆ.
ಈ ಕುರಿತು ಐಟಿಬಿಪಿ ತಮ್ಮ ಅಧಿಕೃತ ಟ್ವಿಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಮಹಿಳಾ ಸೈನಿಕರು ಸೇರಿದಂತೆ 9 ಮಂದಿ ಯೋಧರು ಮೈನಸ್ 24 ಡಿಗ್ರಿ ಮೈಕೊರೆಯ ಚಳಿಯನ್ನು ಲೆಕ್ಕಿಸದೇ ಲಡಾಖ್ ನಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ವಂದೇ ಮಾತರಂ, ಭಾರತ್ ಮಾತಾಕಿ ಜೈ ಘೋಷಣೆಗಳನ್ನು ಕೂಗಿ ಗಣರಾಜ್ಯೋತ್ಸವ ಆಚರಿಸಿದ್ದಾರೆ.
ಹಿಮದ ಮಧ್ಯೆ ಪರೇಡ್ ಮಾಡಿ, ಕೊರೆವ ಚಳಿಯನ್ನೂ ಲೆಕ್ಕಿಸದೇ ದೇಶಪ್ರೇಮ ಮೆರೆದ ಯೋಧರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.




