Kannada NewsLatest

ಬೆಳಗಾವಿ ಪೊಲೀಸರ ಕಾರ್ಯಾಚರಣೆ; ದಾಬಾ ಮೇಲೆ ದಾಳಿ; 20 ಲಕ್ಷ ಮೌಲ್ಯದ ಅಫೀಮು ವಶ

 

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಚೆನ್ನಮ್ಮ ನಗರದಲ್ಲಿರುವ ದಾಬಾ ಹಾಗೂ ಪಾನ್ ಶಾಪ್ ಮೇಲೆ ದಾಳಿ ನಡೆಸಿರುವ ಸಿಇಎನ್ ಪೊಲೀಸರು ಬರೋಬ್ಬರಿ 20 ಲಕ್ಷ ರೂ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು 30 ವರ್ಷದ ಬರಕತ್ ಖಾನ್, 25 ವರ್ಷದ ಕಮಲೇಶ್ ಸುರಜನರಾಮ್ ಹಾಗೂ ಸರವನ್ ಎಂದು ಗುರುತಿಸಲಾಗಿದೆ.

ಬೆಳಗಾವಿ ನಗರ ಉಪ ಪೊಲೀಸ್ ಆಯುಕ್ತ (ಅಪರಾಧ ಹಾಗೂ ಸಂಚಾರ) ವಿಕ್ರಂ ಅಮಟೆ ಅವರ ಮಾರ್ಗದಶನದಲ್ಲಿ ಇನ್ಸ್ ಪೆಕ್ಟರ್ ಬಿ. ಆರ್ ಗಡ್ಡೇಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಖಚಿತ ಮಾಹಿತಿ ಮೇರೆಗೆ ಹೊನಗಾ ಗ್ರಾಮದ ಪಿ.ಬಿ.ರಸ್ತೆ ಪಕ್ಕದಲ್ಲಿದ್ದ ರಾಜಸ್ತಾನ ದಾಬಾ ಪಾನ್ ಶಾಪ್ ಹಾಗೂ ಚೆನ್ನಮ್ಮ ನಗರದಲ್ಲಿನ ದಾಬಾದ ಮೇಲೆ ದಾಳಿ ನಡೆಸಲಾಗಿದೆ. ಬಂಧಿತರಿಂದ 20 ಲಕ್ಷ ಮೌಲ್ಯದ 1 ಕೆಜಿ 15 ಗ್ರಾಂ ಅಫೀಮು ವಶಕ್ಕೆ ಪಡೆಯಲಾಗಿದೆ.

ಪೊಲೀಸ್ ಆಯುಕ್ತ ತ್ಯಾಗರಾಜ್, ಉಪ ಆಯುಕ್ತರಾದ ವಿಕ್ರಂ ಅಮಟೆ ಮತ್ತು ಚಂದ್ರಶೇಖರ ನೀಲಗಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button