Latest

ಕೆರೆ ಪುನಶ್ಚೇತನದಿಂದ ಅಂತರ್ಜಲ ಮಟ್ಟ ಹೆಚ್ಚಳ ; ಡಾ. ವೀರೆಂದ್ರ ಹೆಗ್ಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಜೀವಜಲ ನೀರನ್ನು ಮಿತವಾಗಿ ಬಳಸಬೇಕಾದ ಅನಿವಾರ‍್ಯತೆ ಇದೆ. ಕೆರೆಯನ್ನು ಪುನಶ್ಚೇತನಗೊಳಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗುವುದಲ್ಲದೆ ಜನ, ಜಾನುವಾರುಗಳ ನೀರಿನ ಬವಣೆ ನೀಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೆಂದ್ರ ಹೆಗ್ಗಡೆ ಹೇಳಿದರು.
ಬೆಳಗಾವಿ ಸಮೀಪದ ಹಾಲಗಿಮರಡಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ವತಿಯಿಂದ ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಲಾದ ಕೆರೆ ಹಸ್ತಾಂತರಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಅವರು ನಿರ್ಗತಿಕರಿಗೆ ಮಾಸಾಶನ, ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಜನಮಂಗಲ ಕಾರ್ಯಕ್ರಮದಡಿ ಆಟೋರಿಕ್ಷಾ ವಿತರಣೆ ಮಾಡಿದರು.
ಸಂಸದ ಸುರೇಶ ಅಂಗಡಿ, ಚಿಕ್ಕಮುನವಳ್ಳಿ ಆರೂಢಮಠದ ಶಿವಪುತ್ರ ಸ್ವಾಮಿಜಿ, ರಮೇಶ ಗೋರಲ್, ಸೀತಾರಾಮ ಶೆಟ್ಟಿ, ಚಾರುಕೀರ್ತಿ ಸೈಬಣ್ಣವರ, ಜೀವನಧರ ಕುಮಾರ, ಅರವಿಂದ ಪಾಟೀಲ, ಶೀನಪ್ಪ ಎಂ., ಪ್ರಭಾಕರ, ನಾಮದೇವ, ಸುರೇಶ, ನವಜೀವನ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.

Home add -Advt

Related Articles

Back to top button