ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮುಜರಾಯಿ ಇಲಾಖೆ ದೇವಸ್ಥಾನಗಳಿಗೆ ಆಡಳಿತಾಧಿಕಾರಿ ನೇಮಕ ಪ್ರಕ್ರಿಯೆ ತಡೆಹಿಡಿಯುವಂತೆ ಶಾಸಕ ಅನಿಲ ಬೆನಕೆ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಮಾಡಿದರು.
ಮುಜರಾಯಿ ಇಲಾಖೆ ದೇವಸ್ಥಾನಗಳಿಗೆ ನೇಮಿಸುತ್ತಿರುವ ಆಡಳಿತಾಧಿಕಾರಿ ಹಾಗೂ ಸದಸ್ಯರನ್ನು ನೇಮಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅದರ ಅನಾನುಕೂಲತೆಗಳ ಕುರಿತು ಚರ್ಚೆಮಾಡಲು ಇಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ ರವರು, ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ರವರು, ನ್ಯಾಯವಾದಿಗಳಾದ ಎಮ್. ಬಿ.ಝಿರಲಿ ರವರು, ಪರಿವಾರದ ಪ್ರಮುಖರಾದ ವಿನಯಕ ಗ್ರಾಮೋಪಾಧ್ಯಯ ರವರು ಹಾಗೂ ಅಶೋಕ ಶಿಂಥ್ರೆ ರವರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ದೇಸ್ಥಾನಗಳ ಆಡಳಿತಾಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆಗೆ ಚಾಲನೆ ಕೊಟ್ಟಿರುವುದನ್ನು ತಡೆಹಿಡಿಯುವಂತೆ ವಿನಂತಿಸಿದರು.
ನಾಳೆ ಸಂಬಂಧಪಟ್ಟ ಮಾನ್ಯ ಸಚಿವರನ್ನು ಭೇಟಿಯಾಗಿ ಚರ್ಚೆಮಾಡುತ್ತವೆ. ಕಾರಣ ಈ ನಿರ್ಣಾಯಕ್ಕೆ ತಾವು ಒತ್ತನ್ನು ಕೋಡುವುದುಬೇಡ ಎಂದಿರುವುದಕ್ಕೆ ಜಿಲ್ಲಾಧಿಕಾಗಳು ಒಪ್ಪಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ