ನಾಳೆಯಿಂದ ನಮ್ಮ ಆಟ ಶುರು ಎಂದ ಮಾಜಿ ಸಚಿವ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸರಕಾರ ತೆಗೆದು ಸರಕಾರ ಮಾಡುವ ಶಕ್ತಿ ನನಗಿದೆ. ಇದ್ಯಾವ ಲೆಕ್ಕ. ಅವರ ಆಟ ಇಲ್ಲಿಗೆ ಮುಗಿಯಿತು. ನಾಳೆಯಿಂದ ನಮ್ಮ ಆಟ ಶುರು ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಸಿಡಿ ಲೇಡಿ ತಮ್ಮ ವಿರುದ್ಧ ದೂರು ದಾಖಲಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ನೀವು ಟೆನ್ಶನ್ ಮಾಡ್ಕೋಬೇಡಿ ಎಂದು ಮಾಧ್ಯಮದವರಿಗೆ ಧೈರ್ಯ ತುಂಬಿದರು.
ನನ್ನ ಬಳಿ ಸುಪ್ರಿಂ ಕೋರ್ಟ್ ವಕೀಲರಿದ್ದಾರೆ. ತನ್ನ ಮೈಯನ್ನು ಇಡೀ ಜಗತ್ತಿಗೆ ತೋರಿಸಿದವಳು ನನ್ನ ಮೇಲೆ ದೂರು ನೀಡುತ್ತಿದ್ದಾಳೆ. ನಾನು ಮೊದಲು ಎಫ್ಐಆರ್ ದಾಖಲಿಸಿದ್ದೇನೆ. ಅದು ಮೊದಲು ವಿಚಾರಣೆಯಾಗಲಿ. ಅವರ ಮನೆ.ಲ್ಲಿ ದುಡ್ಡು, ಬಂಗಾರ ಎಲ್ಲ ಸಿಕ್ಕಿದೆ. ತನಿಖೆಯಾಗಲಿ. ನನ್ನದು ತಪ್ಪಿದ್ದರೆ ನಾನೇ ಬಂದು ಪೊಲೀಸ್ ಠಾಣೆಗೆ ಹಾಜರಾಗುತ್ತೇನೆ ಎಂದು ರಮೇಶ ಜಾರಕಿಹೊಳಿ ತಿಳಿಸಿದರು.
ಇದೆಲ್ಲ ನನಗೆ ಮೊದಲೇ ಗೊತ್ತಿತ್ತು. ಷಡ್ಯಂತ್ರ ಎಂದು ಆಗಲೇ ಹೇಳಿದ್ದೇನೆ. ನಾಳೆಯಿಂದ ನಮ್ಮ ಆಟ ಶುರುವಾಗಲಿದೆ. ಸರಕಾರವನ್ನು ತೆಗೆದು ಸರಕಾರ ತೆಗೆಯೋ ಶಕ್ತಿ ನನಗಿದೆ. ಇದ್ಯಾವ ಲೆಕ್ಕ ಎಂದು ಪ್ರಶ್ನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ