Kannada NewsKarnataka NewsLatest

ಮುದ್ದಾದ ಮಗುವಿನ ಜೊತೆ ಮಹಿಳೆ ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಗರದ ಶಹಾಪುರ ಬೋಜಗಲ್ಲಿ ನಿವಾಸಿಯಾದ ಲಕ್ಷ್ಮೀದೇವಿ ವಿಷ್ಣುಕುಮಾರ ಧಾಕಡ ಹಾಗೂ ದೀಪ್ತಿ ವಿಷ್ಣುಕುಮಾರ ಧಾಕಡ (ಮಗಳು) ನಾಪತ್ತೆಯಾಗಿದ್ದಾರೆ.

ಲಕ್ಷ್ಮಿ ದೇವಿ ಅವರು ಮಾ.೨೩ ರಂದು ಸಂಜೆ ೦೫ ಗಂಟೆಗೆ ೫ ತಿಂಗಳ ಮಗಳನ್ನು ಕರೆದುಕೊಂಡು ಪಕ್ಕದ ಮನೆಯವರಿಗೆ ಪಾರ್ಕಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದವಳು ಇಲ್ಲಿಯವರೆಗೆ ಮನೆಗೆ ಬಾರದೇ ಕಾಣೆಯಾಗಿದ್ದಾರೆ ಎಂದು ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಕ್ಷ್ಮೀದೇವಿ ವಿಷ್ಣುಕುಮಾರ ಧಾಕಡ (೧೯ ವರ್ಷ) ೫ ಫೂಟ ಎತ್ತರವಿದ್ದು, ಕೋಲು ಮುಖ, ನೆಟ್ಟನೆ ಮೂಗು, ಸದೃಢ ಮೈಕಟ್ಟು, ಕೆಂಪು ಮೈಬಣ್ಣ ಹೊಂದಿರುತ್ತಾರೆ. ಪಿಂಕ್ ಕಲರ್ ರೌಂಡನೆಕ್ ಟಿ-ಶರ್ಟ್, ಮತ್ತು ಬ್ಲ್ಯಾಕ್ ಕಲರ್ ಪ್ಲಾಜಾ ಪ್ಯಾಂಟ್ ಧರಿಸಿರುತ್ತಾರೆ. ಹಿಂದಿ ಭಾಷೆಯನ್ನು ಮಾತನಾಡುತ್ತಾರೆ.
ದೀಪ್ತಿ ವಿಷ್ಣುಕುಮಾರ ಧಾಕಡ(೫ ತಿಂಗಳು) ೧ ಫೂಟ್ ೫ ಇಂಚು ಎತ್ತರವಿದ್ದು, ದುಂಡು ಮುಖ, ನೆಟ್ಟನೆ ಮೂಗು, ಸದೃಢ ಮೈಕಟ್ಟು, ಕೆಂಪು ಮೈಬಣ್ಣ ಹೊಂದಿರುತ್ತಾರೆ. ಕಪ್ಪು ಮತ್ತು ಹಳದಿ ಬಣ್ಣದ ಶರ್ಟ ಧರಿಸಿರುತ್ತಾರೆ.
ಈ ಪ್ರಕಾರ ಚಹರೆಯುಳ್ಳ ಮಹಿಳೆ ಮತ್ತು ಮಗುವಿನ ಬಗ್ಗೆ ಮಾಹಿತಿ ಸಿಕ್ಕಿದ್ದಲ್ಲಿ ಶಹಾಪೂರ ಪೊಲೀಸ ಠಾಣೆಯ ದೂರವಾಣ ಸಂಖ್ಯೆ : ೦೮೩೧-೨೪೦೫೨೪೪ ಗೆ ಸಂಪರ್ಕಿಸಿ ಎಂದು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button