Latest

ಸಾರಿಗೆ ಮುಷ್ಕರ; 10 ಲಕ್ಷ ಪರಿಹಾರ ನೀಡುವಂತೆ ನೋಟೀಸ್ ಜಾರಿ ಮಾಡಿದ ವಿದ್ಯಾರ್ಥಿನಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಬಿಎಂಟಿಸಿ ಎಂಡಿ ಶಿಖಾ ಅವರಿಗೆ 10 ಲಕ್ಷ ರೂ ಪರಿಹಾರ ಕೇಳಿ ನೋಟೀಸ್ ಜಾರಿ ಮಾಡಿದ್ದಾಳೆ.

ಬೆಂಗಳೂರಿನ ಜೆ.ಎಸ್.ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಕಾಲೇಜಿನ ಬಿಇ ವಿದ್ಯಾರ್ಥಿನಿ ಪಾವನಾ, ಲೀಗಲ್ ನೋಟೀಸ್ ಜಾರಿ ಮಾಡಿದ್ದು, 10 ಲಕ್ಷ ರೂಪಾಯಿ ಪರಿಹಾರಕ್ಕೆ ಒತ್ತಾಯಿಸಿದ್ದಾಳೆ.

ನಾವು ಬಿಎಂಟಿಸಿ ವಾರ್ಷಿಕ ಪಾಸ್ ಖರೀದಿಸಿದ್ದೇವೆ. ನಮ್ಮ ಬಳಿ ಪಾಸ್ ಇದ್ದರೂ ಪ್ರಯೋಜನವಾಗುತ್ತಿಲ್ಲ. ಹಣಕೊಟ್ಟು ಕಾಲೇಜಿಗೆ ಹೋಗ ಬೇಕಾಗಿದೆ. ಎರಡು ದಿನಗಳಿಂದ ಹೆಚ್ಚುವರಿ ಹಣ ಪಾವತಿಸಿ ಸಂಚರಿಸುತಿದ್ದೇವೆ. ಪಾಸ್ ಇದ್ದವರಿಗೂ ಬಸ್ ಸೌಲಭ್ಯ ಒದಗಿಸದಿರುವುದು ಸೇವಾ ನ್ಯೂನ್ಯತೆ ಹಾಗೂ ಅನುಚಿತ ವ್ಯಾಪಾರ ಪದ್ಧತಿ. ಹೀಗಾಗಿ 10 ಲಕ್ಷ ಪರಿಹಾರ ನೀಡಬೇಕು ಎಂದು ವಿದ್ಯಾರ್ಥಿನಿ, ವಕೀಲ ರಮೇಶ್ ನಾಯಕ್ ಮೂಲಕ ಲೀಗಲ್ ನೋಟೀಸ್ ಕಳುಹಿಸಿದ್ದಾಳೆ.

ವಿದ್ಯಾರ್ಥಿನಿ ನೋಟೀಸ್ ಗೆ ಪ್ರತಿಕ್ರಿಯಿಸಿರುವ ಕೋಡಿಹಳ್ಳಿ ಚಂದ್ರಶೇಖರ್, ವಿದ್ಯಾರ್ಥಿನಿಗೆ ಉತ್ತರಿಸಬೇಕಾಗಿದ್ದು ಬಿಎಂಟಿಸಿ. ಬಸ್ ಪಾಸ್ ಗಾಗಿ ಹಣ ಪಡೆದುಕೊಂಡಿರುವುದು ಬಿಎಂಟಿಸಿ. ವಿದ್ಯಾರ್ಥಿಗಳ ಸಮಸ್ಯೆ ಅರಿತು. ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಬೇಕಾಗಿದ್ದು ಬಿಎಂಟಿಸಿ ಜವಾಬ್ದಾರಿ ಎಂದು ಹೇಳಿದ್ದಾರೆ.

ಆತ್ಮಹತ್ಯೆಗೆ ಸಚಿವರ ಸ್ಪಷ್ಟನೆ; ಇಂದಿನಿಂದ ಸಾವಿರ ಬಸ್ ಸಂಚಾರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button