Latest

ಆತ್ಮಹತ್ಯೆಗೆ ಸಚಿವರ ಸ್ಪಷ್ಟನೆ; ಇಂದಿನಿಂದ ಸಾವಿರ ಬಸ್ ಸಂಚಾರ

ಮುಷ್ಕರ ನಿರತ ನೌಕರ ಆತ್ಮಹತ್ಯೆ ಹಿನ್ನೆಲೆ

ಪ್ರಗತಿವಾಹಿನಿ ಸುದ್ದಿ; ಬೀದರ್:  ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಆತ್ಮಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಆತ ಆತ್ಮಹತ್ಯೆ ಮಾಡಿಕೊಂಡಿದ್ದು ಸಾಲದ ವಿಚಾರವಾಗಿ ಹೊರತು ಅಧಿಕಾರಿಗಳ ಕಿರುಕುಳದಿಂದ ಅಲ್ಲ ಎಂದು ಹೇಳಿದ್ದಾರೆ.

ಬೀದರ್ ಜಿಲ್ಲೆ ಹುಮ್ನಾಬಾದ್ ನಲ್ಲಿ ಮಾತನಾಡಿದ ಸಚಿವ, ಸಾಲ ಹೆಚ್ಚಾಗಿ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಲದಿಂದಾಗಿ ಆತ ಹಲವು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ. ಆದರೆ ಸಾರಿಗೆ ಸಿಬ್ಬಂದಿಗಳು ಅಧಿಕಾರಿಗಳ ಕಿರುಕುಳ ಎಂದು ಆರೋಪಿಸಿ ಇಲಾಖೆ ಮೇಲೆ ಕೆಟ್ಟ ಹೆಸರು ತರುವ ಯತ್ನ ನಡೆಸಿದ್ದಾರೆ ಎಂದರು.

Home add -Advt

ನಮ್ಮ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಲು ಸಿದ್ದರಿದ್ದಾರೆ. ತಮಗೆ ಸಂಬಳ ಹೆಚ್ಚಿಸಿದರೆ ಸಾಕು ಎಂದು ಹೇಳುತ್ತಿದ್ದಾರೆ. ಇಂದಿನಿಂದ 1000 ಸರ್ಕಾರಿ ಬಸ್ ಗಳು ಸಂಚರಿಸಲಿವೆ. ಆದರೆ ಮುಷ್ಕರ ನಿರತ ಸಾರಿಗೆ ನೌಕರರು ನಮ್ಮ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದಾರೆ. ಕರ್ತವ್ಯಕ್ಕೆ ಹಾಜರಾಗದಂತೆ ತಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಸವದತ್ತಿಯಲ್ಲಿ ಸಾರಿಗೆ ನೌಕರ ಆತ್ಮಹತ್ಯೆ

Related Articles

Back to top button