Latest

ಸಿಪಿಐ-ಎಂ ಮುಖಂಡ ಸೀತಾರಾಮ್ ಯಚೂರಿ ಪುತ್ರ ಕೋವಿಡ್ ಗೆ ಬಲಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸಿಪಿಐ-ಎಂ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಪುತ್ರ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ತಮ್ಮ ಹಿರಿಯ ಪುತ್ರ ಆಶಿಸ್ ಕೋವಿಡ್ ನಿಂದ ಮೃತಪಟ್ಟಿರುವುದಾಗಿ ಸ್ವತ ಯಚೂರಿ ತಿಳಿಸಿದ್ದಾರೆ.

ಗುರುಗ್ರಾಮದ ವೇದಾಂತ್ ಆಸ್ಪತ್ರೆಯಲ್ಲಿ ಕಲೆದ 2 ವಾರಗಳಿಂದ ಆಶಿಶ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಆತನಿಗೆ ಚಿಕಿತ್ಸೆ ನೀಡಿದ ವೈದ್ಯರು, ನರ್ಸ್ ಗಳು ಹಾಗೂ ಹೋರಾಟದಲ್ಲಿ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

Related Articles

ಆಶಿಶ್ ದೆಹಲಿಯ ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದರು.

Home add -Advt

Related Articles

Back to top button