Latest

ಬಂದೇಬಿಡ್ತು ಸ್ಪುಟ್ನಿಕ್-ವಿ ಲಸಿಕೆ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಕೊರೊನಾ ಸೋಂಕಿನ ವಿರುದ್ಧ ರಷ್ಯಾ ತಯಾರಿಸಿರುವ ಸ್ಪುಟ್ನಿಕ್ -ವಿ ಲಸಿಕೆ ಹೊತ್ತ ವಿಮಾನ ಭಾರತಕ್ಕೆ ಆಗಮಿಸಿದ್ದು, ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆ.

ದೇಶದಲ್ಲಿ ಮೂರನೇ ಹಂತದ ಲಸಿಕೆ ನೀಡಿಕೆಯಲ್ಲಿ ಸ್ಪುಟ್ನಿಕ್-ವಿ ಲಸಿಕೆ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾಹಿತಿಯಿದೆ. ಇದೀಗ ರಷ್ಯಾದಿಂದ ಮೊದಲ ಬ್ಯಾಚ್ ನ 1.5 ಲಕ್ಷ ಡೋಸ್ ಲಸಿಕೆ ಆಗಮಿಸಿದ್ದು ಉಳಿದ 3 ಲಕ್ಷ ಮಿಲಿಯನ್ ಡೋಸ್ ಗಳು ಈ ತಿಂಗಳಾಂತ್ಯಕ್ಕೆ ಆಗಮಿಸಲಿದೆ.

ಡ್ರಗ್ ಕಂಟೋಲರ್ ಜನರಲ್ ಆಫ್ ಇಂಡಿಯಾ ದೇಶದಲ್ಲಿ ಕೊರೊನಾ ಸೋಂಕಿಗೆ ಸ್ಪುಟ್ನಿಕ್-ವಿ ಲಸಿಕೆ ಬಳಸಲು ಅನುಮತಿ ನೀಡಿದ್ದು, ಸ್ಪುಟ್ನಿಕ್-ವಿ ಲಸಿಕೆ ಅನುಮೋದಿಸಿರುವ 60ನೇ ದೇಶ ಭಾರತವಾಗಿದೆ.

ಬೆಳಗಾವಿಯ 12 ಪತ್ರಕರ್ತರಿಗೆ ಕೊರೋನಾ ಪಾಸಿಟಿವ್
ಕೊರೊನಾ ಅಬ್ಬರ; ಆತಂಕ ವ್ಯಕ್ತಪಡಿಸಿದ ಸಿಎಂ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button