ಪ್ರಗತಿವಾಹಿನಿ ಸುದ್ದಿ; ಲಕ್ನೋ: ಭಾರತದಲ್ಲಿ ಕೊರೊನಾ ಅಟ್ಟಹಾಸದ ನಡುವೆ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ನಂತಹ ಅಪಾಯಕಾರಿ ಫಂಗಸ್ ಗಳು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಇದೀಗ ಮತ್ತೋಂದು ಫಂಗಸ್ ಪತ್ತೆಯಾಗಿದ್ದು, ಯಲ್ಲೋ ಫಂಗಸ್ ಎಂಬ ಹೊಸ ಶಿಲೀಂದ್ರ ಸೋಂಕು ಪತ್ತೆಯಾಗಿದೆ.
ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ವ್ಯಕ್ತಿಯೊಬ್ಬರಲ್ಲಿ ಯಲ್ಲೋ ಫಂಗಸ್ ಪತ್ತೆಯಾಗಿದ್ದು, ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರಲ್ಲಿಯೇ ಈ ಫಂಗಸ್ ಕಂಡುಬರುತ್ತಿದೆ ಎನ್ನಲಾಗಿದೆ.
ಯಲ್ಲೋ ಫಂಗಸ್ ದೇಹದಲ್ಲೇ ಹುಟ್ಟುವ ಫಂಗಸ್ ಆಗಿದ್ದು, ದೇಹದಲ್ಲಿ ಕೀವು ಲೀಕ್ ಆಗಿ, ಗಾಯ ಬೇಗ ಗುಣಮುಖವಾಗಂದಂತೆ ಮಾಡುತ್ತದೆ. ಇದು ಬಹುಬೇಗವಾಗಿ ದೇಹದಲ್ಲಿ ಹರಡುತ್ತದೆ. ಯಲ್ಲೋ ಫಂಗಸ್ ಜೀವಕ್ಕೆ ಹೊಕ್ಕರೆ ಅತಿ ಅಪಾಯಕಾರಿಯಾಗಿದೆ. ಯಲ್ಲೋ ಫಂಗಸ್ ತೀವ್ರಗೊಂಡಲ್ಲಿ ಸೋಂಕಿತ ವ್ಯಕ್ತಿಯಿಂದ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕೂಡ ಬೇಗನೆ ಹರಡಬಹುದಾಗಿದೆ.
ಅತಿ ಸ್ಟಿರಾಯ್ಡ್, ಬ್ಯಾಕ್ಟಿರಿಯಾ ನಿರೋಧಕಗಳ ಬಳಕೆ, ಸ್ವಚ್ಚತೆ ಇಲ್ಲದಿದ್ದಲ್ಲಿ ಈ ಯಲ್ಲೋ ಫಂಗಸ್ ಕಂಡುಬರುತ್ತದೆ, ಇದರಿಂದ ಅತಿಯಾದ ಸುಸ್ತು, ತೂಕ ಕಡಿಮೆ, ಹಸಿವು ಕಡಿಮೆಯಾಗುತ್ತದೆ. ಮೈಯಲ್ಲಿ ಗಾಯಗಳು ಆರಂಭವಾಗಿ, ಅದು ತಕ್ಷಣ ಕಡಿಮೆಯಾಗ ಲಕ್ಷಣಗಳು ಕಂಡುಬರುತ್ತದೆ. ಯಲ್ಲೋ ಫಂಗಸ್ ನಿಂದ ಬಹು ಅಂಗಾಂಗ ವೈಫಲ್ಯವಾಗಲಿದೆ. ಯಲ್ಲೋ ಫಂಗಸ್ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್ ಗಿಂತಲೂ ಹೆಚ್ಚು ಅಪಾಯಕಾರಿಯಾಗಿದ್ದು, ಯಾವುದೇ ಲಕ್ಷಣ ಕಂಡುಬಂದರೂ ತಕ್ಷಣ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ದೀರ್ಘಕಾಲ ಒಂದೇ ಮಾಸ್ಕ್ ಬಳಸುತ್ತಿದ್ದರೆ ಇರಲಿ ಎಚ್ಚರ..!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ