Kannada NewsKarnataka NewsLatest

ಲಸಿಕೆ ತೆಗೆದುಕೊಂಡರೂ ಮುಂಜಾಗ್ರತೆ ಮರೆಯಬೇಡಿ – ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಹಿರೇಬಾಗೇವಾಡಿ ಗ್ರಾಮದಲ್ಲಿ  ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ, ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ, ಇನ್ನೋರ್ವ ಕಾಂಗ್ರೆಸ್ ಮುಖಂಡ ಸಿ ಸಿ ಪಾಟೀಲ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿ 18 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಕೋವಿಡ್ ಲಸಿಕೆಗಳ ( ವ್ಯಾಕ್ಸಿನೇಷನ್‌ ) ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ಈ ಸಮಯದಲ್ಲಿ  ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಎಲ್ಲರೂ  ಕೋವಿಡ್ ಲಸಿಕೆಗಳನ್ನು ತೆಗೆದುಕೊಳ್ಳಬೇಕು. ಕೊರೋನಾ ಸೋಂಕಿನಿಂದ ತಪ್ಪಿಸಿಕೊಳ್ಳಲು‌ ಇರುವ ಮಾರ್ಗವೆಂದರೆ ಲಸಿಕೆ. ಈ ಕೋವಿಡ್ ಲಸಿಕೆ ಇವತ್ತಿನ ಸಮಯದಲ್ಲಿ ಸಂಜೀವಿನಿಯಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ಸಹಕಾರಿಯಾಗಲಿದೆ. ಆದಕಾರಣ ಎಲ್ಲರೂ ಕೋವಿಡ್ ಲಸಿಕೆಗಳಿಗೆ ಒಳಗಾಗಿ ಸೋಂಕಿನಿಂದ ದೂರವಿರಬೇಕು. ಲಸಿಕೆ ತೆಗೆದುಕೊಂಡು ನಂತರವೂ ಯಾವುದನ್ನೂ ನಿರ್ಲಕ್ಷ್ಯ ಮಾಡದೆ ಸಾಮಾಜಿಕ ಅಂತರ, ಮಾಸ್ಕ್ ಸ್ಯಾನಿಟೈಸರ್ ಗಳ ಉಪಯೋಗಗಳನ್ನು ಮರೆಯಬಾರದು ಎಂದುವಿನಂತಿಸಿದರು.
ಈ ಸಂದರ್ಭದಲ್ಲಿ ದರ್ಗಾ ಅಜ್ಜನವರಾದ ಅಶ್ರಫ್ ಖಾದ್ರಿ, ಸಿ ಸಿ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸ್ವಾತಿ ಇಟಗಿ, ಉಪಾಧ್ಯಕ್ಷರಾದ ನಾಜರಿನ್ ಕರಿದಾವಲ್, ಗೌರವ್ವ ಪಾಟೀಲ, ಶಮೀನಾ ನದಾಪ್, ಸುರೇಶ ಇಟಗಿ, ಬಿ ಜಿ ವಾಲೀಟಗಿ, ಶ್ರೀಕಾಂತ ಮಾಧುಬರಮಣ್ಣವರ, ಆನಂದ ಪಾಟೀಲ, ಗೌಸ್ ಜಾಲಿಕೊಪ್ಪ, ಗೌಡಪ್ಪ ಜಿರಲಿ, ಸೈಯದ್ ಸನದಿ, ಯಾಕುಬ್ ದೇವಲಾಪೂರ, ಸಿಪು ಹಳೆಮನಿ, ಬಸವರಾಜ ಹುಲಮನಿ, ಅನಿಲ ಪಾಟೀಲ, ಅಡಿವೆಪ್ಪ ತೋಟಗಿ, ಉಳವಪ್ಪ ರೊಟ್ಟಿ, ಸಮೀರ ಸುತಗಟ್ಟಿ, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button