
ಪ್ರಗತಿವಾಹಿನಿ ಸುದ್ದಿ; ಮುಂಬೈ: ಮಾಹಾರಾಷ್ಟ್ರದ ಕಾರ್ಬುಡೆ ಸುರಂಗದಲ್ಲಿ ದೆಹಲಿ-ಗೋವಾ ರಾಜಧಾನಿ ಎಕ್ಸ್ ಪ್ರೆಸ್ ರೈಲು ಹಳಿತಪ್ಪಿದ್ದು, ಅದೃಷ್ಟವಶಾತ್ ದುರಂತವೊಂದು ತಪ್ಪಿದೆ.
ದೆಹಲಿಯ ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಗೋವಾದ ಮಡ್ಗಾಂವ್ ಗೆ ತೆರಳುತ್ತಿದ್ದಾಗ ಮುಂಬೈನಿಂದ ಸುಮಾರು 325 ಕೀಮೀ ದೂರದಲ್ಲಿರುವ ಕಾರ್ಬುಡೆ ಸುರಂಗದೊಳಗೆ ಇಂದು ಮುಂಜಾನೆ 4.15ರ ಸುಮಾರಿಗೆ ಹಳಿ ತಪ್ಪಿದೆ.
ಹಳಿಗಳ ಮೇಲೆ ಬೃಹದಾಕಾರದ ಬಂಡೆ ಉರುಳಿಬಿದ್ದಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ದೆಹಲಿಗೆ ದೌಡಾಯಿಸಿದ ಸಿ.ಪಿ. ಯೋಗೇಶ್ವರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ