Latest

ದೆಹಲಿಗೆ ದೌಡಾಯಿಸಿದ ಸಿ.ಪಿ. ಯೋಗೇಶ್ವರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಇನ್ನೂ ಜೀವಂತವಾಗಿದ್ದು, ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ದಿಢೀರ್ ದೆಹಲಿಗೆ ಪ್ರಯಾಣಿಸಿದ್ದು, ಹೈಮಕಾಂಡ್ ಜೊತೆ ಮತ್ತೆ ಚರ್ಚೆ ನಡೆಸಲಿದ್ದಾರೆ.

ನಿನ್ನೆಯಷ್ಟೆ ಸಿ.ಪಿ.ಯೋಗೇಶ್ವರ್, ಅರುಣ್ ಸಿಂಗ್ ಎದುರು ಪರೀಕ್ಷೆ ಬರೆದಿದ್ದೇವೆ. ಫಲಿತಾಂಶ ಬಂದಿಲ್ಲ ಎಂದು ಹೇಳಿದ್ದರು. ಇದೀಗ ಆಪ್ತರ ಜೊತೆ ಚರ್ಚೆ ಬಳಿಕ ದೆಹಲಿಗೆ ದೌಡಾಯಿಸಿದ್ದು, ವರಿಷ್ಠರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.

Home add -Advt

ಇಂದು ಬಿಜೆಪಿ ಕೇಂದ್ರ ಪಾರ್ಲಿಮೆಂಟರಿ ಬೋರ್ಡ್ ಸಭೆಯಿದ್ದು ಸಭೆಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಾರಿಗೆ ಸಿಬ್ಬಂದಿಗೆ ಶಾಕ್: ಮುಷ್ಕರ ನಿಷೇಧ

Related Articles

Back to top button