Kannada NewsKarnataka NewsLatest

ಬೆಳಗಾವಿಯಲ್ಲಿ 5 ಮಹಿಳೆಯರು, 11 ಮಕ್ಕಳ ರಕ್ಷಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣ -೧೦೯೮, ಬೆಳಗಾವಿ ಹಾಗೂ ಮಹಿಳಾ ಪೊಲೀಸ್ ಠಾಣೆ, ಕ್ಯಾಂಪ್ ಬೆಳಗಾವಿ ನೇತೃತ್ವದಲ್ಲಿ ಮಕ್ಕಳ ಕಲ್ಯಾಣ ಸಮಿತಿ, ಇವರ ಜಂಟಿ ತಂಡದೊಂದಿಗೆ ಜೂನ್ ೩೦ ಮಧ್ಯಾಹ್ನ ೧೨ ಗಂಟೆಗೆ ಚನ್ನಮ್ಮಾ ವೃತ್ತ, ಬಸ್ ನಿಲ್ದಾಣ, ರಾಮದೇವ ವೃತ್ತ, ಕೆ.ಎಲ್.ಇ ಆಸ್ಪತ್ರೆಯವರೆಗೂ ಮತ್ತು ರೇಲ್ವೆ ಸ್ಟೇಷನ ನಗರದ ಮುಂತಾದ ಪ್ರದೇಶಗಳಲ್ಲಿ ಆಪರೇಷನ್ ಮುಸ್ಕಾನ್ ಕಾರ್ಯಕ್ರಮದಲ್ಲಿ ಬಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸುವ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಕಾರ್ಯಾಚರಣೆಯಲ್ಲಿ ೧೮ ವರ್ಷ ಮೇಲ್ಪಟ್ಟ ೫ ಮಹಿಳೆಯರು, ೬ ವರ್ಷದ ಒಳಗಿನ ೫, ಮತ್ತು ೬ ರಿಂದ ೧೨ ವರ್ಷದೊಳಗಿನ ೩ ಮಕ್ಕಳನ್ನು ಬಿಕ್ಷಾಟನೆಯಿಂದ ಬಿಡುಗಡೆಗೊಳಿಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಯಿತು.
ಮಕ್ಕಳನ್ನು ರಕ್ಷಣೆ ಮತ್ತು ಪೋಷಣೆಗಾಗಿ ಕ್ವಾರಂಟೈನ್‌ಗಾಗಿ ಸಂಸ್ಥೆಗಳಲ್ಲಿ ಅಭಿರಕ್ಷಣೆಗೆ ಇರಿಸಲಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಮತ್ತು ಮಹಿಳೆಯರ ಸೂಕ್ತ ಮಾಹಿತಿಯನ್ನು ಪಡೆದು ಮೇಲಾಧಿಕಾರಿಗಳ ಆದೇಶದ ಮೇರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಈ ಕುಟುಂಬಗಳಲ್ಲಿ ೨ ಕುಟುಂಬಗಳು ಬೆಳಗಾವಿ ಜಿಲ್ಲೆಗೆ ಸೇರಿದವರಾಗಿದ್ದು, ಇನ್ನುಳಿದ ಕುಟುಂಬಗಳು ರಾಜಸ್ಥಾನ ರಾಜ್ಯಕ್ಕೆ ಸೇರಿದವರಾಗಿದ್ದಾರೆ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.

ಗಾಂಜಾ ಸಾಗಾಟ; ವೈದ್ಯೆ ಸೇರಿ ಇಬ್ಬರು ಅರೆಸ್ಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button