Latest

ಐಸ್ ಕ್ರೀಂ ನಲ್ಲಿ ವಿಷ ಬೆರೆಸಿಕೊಟ್ಟ ತಂದೆ; ಓರ್ವ ಮಗು ಸಾವು

ಪ್ರಗತಿವಾಹಿನಿ ಸುದ್ದಿ; ಮುಂಬೈ; ತಂದೆಯೊಬ್ಬ ತನ್ನ ಮೂವರು ಮಕ್ಕಳಿಗೆ ಐಸ್ ಕ್ರೀಂ ನಲ್ಲಿ ವಿಷ ಬೆರಸಿ ನೀಡಿರುವ ಘೋರ ಘಟನೆ ಮುಂಬೈನ ಮಾನ್ ಖುರ್ಡ್ ನಲ್ಲಿ ಬೆಳಕಿಗೆ ಬಂದಿದೆ.

ಐಸ್ ಕ್ರೀಂ ತಿಂದ ಓರ್ವ ಮಗು ಸಾವನ್ನಪ್ಪಿದ್ದು, ಇನ್ನಿಬ್ಬರು ಮಕ್ಕಳು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಮೃತ ಮಗು 5 ವರ್ಷದ ಅಲಿ ಮೊಹಮ್ಮದ್ ಎಂದು ತಿಳಿದುಬಂದಿದೆ. ಇನ್ನಿಬ್ಬರು ಮಕ್ಕಳಾದ 7 ವರ್ಷದ ಅಲೀನಾ ಹಾಗೂ 2 ವರ್ಷದ ಅರ್ಮಾನ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Related Articles
Home add -Advt

ಪತಿ-ಪತ್ನಿ ನಡುವಿನ ಮನಸ್ಥಾಪವೇ ಕೃತ್ಯಕ್ಕೆ ಕಾರಣ ಎನ್ನಲಾಗಿದ್ದು, ವಾರದ ಹಿಂದಷ್ಟೇ ಗಂಡ-ಹೆಂಡತಿ ನಡುವೆ ಜಗಳವಾಗಿತ್ತು. ಈ ಘಟನೆ ಬೆನ್ನಲ್ಲೇ ಪತಿ ಮೊಹಮ್ಮದ್ ಅಲಿ ನೌಶಾದ್ ಮೂವರು ಮಕ್ಕಳಿಗೆ ಐಸ್ ಕ್ರೀಂ ನಲ್ಲಿ ವಿಷ ಹಾಕಿಕೊಟ್ಟು ಕೊಲ್ಲಲು ಯತ್ನಿಸಿದ್ದಾರೆ. ಓರ್ವ ಮಗು ಸಾವನ್ನಪ್ಪಿದೆ ಎಂದು ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಆರೋಪಿ ಮೊಹಮ್ಮದ್ ಅಲಿ ನೌಶಾದ್ ನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ಮತ್ತೆ ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟ ದಿಲೀಪ್ ಕುಮಾರ್

Related Articles

Back to top button