Latest

ಇಂದಿನಿಂದ ಕರುನಾಡಿನ ಬೀಗ ಓಪನ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಮೂರನೇ ಹಂತದ ಲಾಕ್ ಡೌನ್ ಜಾರಿಗೆ ಬಂದಿದ್ದು, ಕರ್ನಾಟಕ ಶೇ.95ರಷ್ಟು ಅನ್ ಲಾಕ್ ಆಗಿವೆ. ವಾಣಿಜ್ಯ ಚಟುವಟಿಕೆ, ಸಾರಿಗೆ ಸಂಚಾರಕ್ಕೆ, ಸರ್ಕಾರಿ, ಖಾಸಗಿ ಕಚೇರಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಮಾಲ್ ಗಳು, ಅಂಗಡಿಗಳು, ಹೋಟೆಲ್, ಜಿಮ್, ಬಾರ್, ದೇವಸ್ಥಾನ, ಮಸೀದಿ ಚರ್ಚಗಳು ಓಪನ್ ಆಗಿದ್ದು, ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಆದರೆ ತೀರ್ಥ, ಪ್ರಸಾದ ಹಾಗೂ ವಿಶೇಷ ಪೂಜೆಗಳಿಗೆ ನಿರ್ಬಂಧ ವಿಧಸಾಗಿದೆ. ವೀಕೆಂಡ್ ಕರ್ಫ್ಯೂ ತೆರವುಗೊಳಿಸಲಾಗಿದ್ದು, ನೈಟ್ ಕರ್ಫ್ಯೂ ಮಾತ್ರ ಜುಲೈ 19ರವರೆಗೂ ಮುಂದುವರೆಯಲಿದೆ.

ಅನ್ಲಾಕ್ 3.0 ಜಾರಿಯಾದ ಬೆನ್ನಲ್ಲೇ ರಾಜ್ಯಾದ್ಯಂತ ಬಹುತೇಕ ದೇವಾಲಯಗಳಲ್ಲಿ ಪೂಜೆ-ಅಭಿಷೇಕ ನೆರವೇರಿಸಲಾಗುತ್ತಿದೆ.

ಅಂಗಡಿ ತೆರೆಯಲು ಬೆಳಿಗ್ಗೆ 5ರಿಂದ ರಾತ್ರಿ 9 ಗಂಟೆಯವರೆಗೆ ಅವಕಾಶ
ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ
ಥೀಯೆಟರ್ ತೆರೆಯಲು ಅವಕಾಶವಿಲ್ಲ
ಮಾಲ್ ಶಾಪಿಂಗ್ ಕಾಂಪ್ಲೆಕ್ಸ್ ಓಪನ್
ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಶೇ 100ರಷ್ಟು ಜನರಿಗೆ ಅವಕಾಶ
ದೇವಸ್ಥಾನಗಳಲ್ಲಿ ಭಕ್ತರಿಗೆ ಅವಕಾಶವಿದೆ ಆದರೆ ವಿಶೇಷ ಪೂಜೆಗೆ ಅವಕಾಶವಿಲ್ಲ
ಮದುವೆ ಸಮಾರಂಭಕ್ಕೂ ಶೇ.100ರಷ್ಟು ಜನರಿಗೆ ಅವಕಾಶ
ಬಸ್, ಮೆಟ್ರೋದಲ್ಲಿ ಶೇ.100ರಷ್ಟು ಪ್ರಯಾಣಿಕರಿಗೆ ಅವಕಾಶ
ಪ್ರತಿಭಟನೆ, ಸಭೆ-ಸಮಾರಂಭಗಳಿಗೆ ಅವಕಾಶವಿಲ್ಲ
ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆ ತೆರೆಯಲು ಸದ್ಯಕ್ಕೆ ಅವಕಾಶವಿಲ್ಲ.
ಆನ್ ಲೈನ್ ಕ್ಲಾಸ್ ಮುಂದುವರಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button