Latest

ನಟ ದರ್ಶನ್ ಗೆ ಇಂದ್ರಜಿತ್ ಲಂಕೇಶ್ ತಿರುಗೇಟು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಾಲೇಂಜಿಂಗ್ ಸ್ಟಾರ್ ದರ್ಶನ್ ಸವಾಲುಗಳಿಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಾನು ಯಾವುದೇ ಅಸಭ್ಯ ಪದಗಳನ್ನು ಬಳಸಿಲ್ಲ, ಕನ್ನಡ ಭಾಷೆಯ ಪದಗಳನ್ನು ಅರ್ಥ ಮಾಡಿಕೊಂಡು ದರ್ಶನ್ ಮಾತನಾಡಲಿ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, ನಟ ದರ್ಶನ್ ವಿಚಲಿತರಾಗುವ ಅಗತ್ಯವಿಲ್ಲ. ಹಲ್ಲೆ ಪ್ರಕರಣಗಳ ಬಗ್ಗೆ ನನ್ನ ಬಳಿ ಸಾಕ್ಷ್ಯಗಳಿವೆ ತನಿಖಾ ತಂಡಗಳಿಗೆ ಸಾಕ್ಷ್ಯ ಒದಗಿಸಲು ಸಿದ್ಧ. ಆಡಿಯೋ ಸಂಭಾಷೆ ಬಗ್ಗೆಯೂ ತನಿಖೆಯಾಗಲಿ. ದರ್ಶನ್ ಹಿರೋಯಿಸಂ ನಲ್ಲಿ ಮಾತನಾಡುವ ಅಗತ್ಯವಿಲ್ಲ, ಅವರು ಬಳಸುತ್ತಿರುವ ಪದ ಪ್ರಯೋಗದಿಂದಲೇ ವಿಷಯ ಡೈವರ್ಟ್ ಮಾಡಲು ಹೊರಟಿರುವುದು, ವಿಚಲಿತರಾಗುತ್ತಿರುವುದು ಗೊತ್ತಾಗುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಅನ್ ಎಜುಕೇಟೆಡ್ ಎಂದು ನಾನು ಹೇಳಿಲ್ಲ, ಇನ್ನು ಎಜುಕೇಶನ್ ಎಂಬುದು ವಿದ್ಯಾಭ್ಯಾಸದಿಂದ ಬರುವುದಲ್ಲ, ಅದು ನಿಮ್ಮ ನಡವಳಿಕೆ, ನಿಮ್ಮ ತಿಳುವಳಿಕೆಗೆ ಬರುವಂತದ್ದು. ನಾವಾಡುವ ಮಾತುಗಳು, ಬಳಸುವ ಪದಗಳು ನಮ್ಮ ಸಂಸ್ಕೃತಿಯನ್ನು ಹೇಳುತ್ತದೆ. ದರ್ಶನ್ ಅಂದು ತಲೆ ಸೀಳುತ್ತೇನೆ ಎಂದು ಹೇಳಿಕೆಗಳನ್ನು ನೀಡಿದ್ದಾರೆ ಓರ್ವ ಮೇರು ನಟನಾಗಿ ಅಭಿಮಾನಿಗಳಿಗೆ, ಜನರಿಗೆ ಮಾದರಿಯಾಗಬೇಕೆ ಹೊರತು ಇಂತಹ ಪದಗಳನ್ನು ಬಳಸಬೇಡಿ ಎಂದು ಹೇದ್ದೇನೆ. ಇನ್ನು ದರ್ಶನ್ ಗಾಂಡು ಎಂಬ ಪದ ಪ್ರಯೋಗ ಮಾಡಿಲ್ಲ, ನಾನು ಹೇಳಿರುವ ಪದ ಪ್ರಯೋಗದ ಬಗ್ಗೆ ನನಗೆ ಗೊತ್ತಿದೆ. ನಾನು ಹೇಳಿದ್ದು ದರ್ಶನ್ ಗೂಂಡಾಗಿರಿ ಮಾಡುತ್ತಿದ್ದಾರೆ ಎಂದ್ದೇನೆ. ದರ್ಶನ್ ಸಾಕ್ಷ್ಯ ಬಿಡುಗಡೆ ಮಾಡಿದರೆ ಮಾತ್ರ ಗಂಡಸುತನಾನ? ಇಲ್ಲಿ ಗಂಡಸುತನದ ಪ್ರಶ್ನೆ ಬರಲ್ಲ. ಶಬ್ಧ ಬಳಕೆ ಮಾಡುವಾಗ ಹಿಡಿತವಿರಬೇಕು ಜವಾಬ್ದಾರಿಯಿಂದ ಮಾತನಾಡಬೇಕು ಅಸಂಬದ್ಧ ಪದಗಳನ್ನು ಬಳಸುವುದು ಸರಿಯಲ್ಲ. ಇಂತಹ ಪದಪ್ರಯೋಗಗಳಿಂದಲೇ ಅವರ ಸಂಸ್ಕೃತಿ, ಸಂಸ್ಕಾರ ಎಂತದ್ದು ಎಂಬುದು ಗೊತ್ತಾಗುತ್ತಿದೆ. ಇಷ್ಟಕ್ಕೂ ದರ್ಶನ್ ವಿಚಲಿತರಾಗುತ್ತಿರುವುದು ಯಾಕೆ? ನನ್ನ ಬಳಿಯಿರುವ ಸಾಕ್ಷ್ಯವನ್ನು ತನಿಖಾ ತಂಡಕ್ಕೆ ನೀಡುತ್ತೇನೆ ಎಂದುಹೇಳಿದ್ದಾರೆ.

ಇನ್ನು ಡ್ರಗ್ಸ್ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಪೊಲೀಸರು ಕೋಟ್ಯಂತರ ರೂಪಾಯಿ ಡ್ರಗ್ಸ್ ವಶ ಪಡಿಸಿಕೊಂಡಿದ್ದಾರೆ. ಮಾದಕ ವಸ್ತುಗಳ ಜಾಲಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಿರುವುದು. ಇನ್ನು 25 ಕೋಟಿ ವಂಚನೆ ಯತ್ನ ಪ್ರಕರಣದಲ್ಲಿ ಅರುಣಾ ಕುಮಾರಿಯನ್ನು ಬಳಿಸಿಕೊಂಡಿದ್ದು ಯಾಕೆ? ಆಕೆ ಗೊತ್ತೆ ಇಲ್ಲ ಎನ್ನುವುದಾದರೆ ದರ್ಶನ್ ತೋಟಕ್ಕೂ ಆಕೆಯನ್ನು ಕರೆಸಿಕೊಂಡಿದ್ದೇಕೆ? ಮಹಿಳೆಗೆ ಬೆದರಿಕೆ ಹಾಕಿದ್ದಾರೂ ಯಾಕೆ? ಹೋಟೆಲ್ ಸಿಬ್ಬಂದಿಗಳು, ಸೆಕ್ಯೂರಿಟಿಗಳಿಗಳ ಮೇಲೆ ಹಲ್ಲೆ ನಡೆಸಿದ್ದು, ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದು ಎಲ್ಲದ ಬಗ್ಗೆಯೂ ಸಾಕ್ಷ್ಯವಿದೆ. ಹೋಟೆಲ್ ಗೆ ಹೋಗಿ ದರ್ಶನ್ ಪ್ರೂವ್ ಮಾಡಲು ಹೊರಟಿದ್ದಾರೂ ಏನು? ಹಲ್ಲೆ ಪ್ರಕರಣ ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ. ಅನ್ಯಾಯ ನಡೆಯುತ್ತಿರುವುದಕ್ಕೆ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಮನವಿ ಮಾಡಿರುವುದು. ತನಿಖಾ ತಂಡಗಳಿಗೆ ನನ್ನ ಬಳಿ ಇರುವ ಎಲ್ಲಾ ಸಾಕ್ಷಿಗಳನ್ನು ಒದಗಿಸಲು ಸಿದ್ದ. ದರ್ಶನ್ ತಪ್ಪು ಮಾಡಿಲ್ಲ ಎನ್ನುವುದಾದರೆ ಪ್ರಮಾಣ ಮಾಡಲಿ ಎಂದು ಹೇಳಿದ್ದಾರೆ.

Home add -Advt

ಇಂದ್ರಜಿತ್ ಲಂಕೇಶ್ ಗೆ ದರ್ಶನ್ ಸವಾಲು

Related Articles

Back to top button