Kannada NewsKarnataka News

ಉಚಿತ ಅಂಬುಲೆನ್ಸ್ ಸೇವೆ ಪ್ರಾರಂಭಿಸಿದ ಕಿರಣ ಜಾಧವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೊರೊನಾ ಕಾಲದಲ್ಲಿ ಬಡವರಿಗೆ ಆಹಾರ ಕಿಟ್ ಹಂಚಿಕೆ, ಔಷಧೋಪಚಾರ ಮಾಡಿರುವ ಒಬಿಸಿ‌ ಮೋರ್ಚಾದ ರಾಜ್ಯ ಬಿಜೆಪಿ ಕಾರ್ಯದರ್ಶಿ ಕಿರಣ ಜಾಧವ, ಇಂದು ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿದ್ದಾರೆ.
 ಕೊರೋನಾವನ್ನೆ ಬಂಡವಾಳ ಮಾಡಿಕೊಂಡಿರುವ ಕೆಲವು ಅಂಬುಲೆನ್ಸ್ ಚಾಲಕರ ಕಿರುಕುಳದಿಂದ ರೋಗಿಗಳು ಪರದಾಡುವಂತೆ ಆಗಿದ್ದು, ಅದನ್ನು ತಪ್ಪಿಸಲು ಬೆಳಗಾವಿ ನಗರದ ಸಂಕಷ್ಟದಲ್ಲಿರುವ ಜನರಿಗಾಗಿ ಗಣೇಶ‌ ಸೇವಾ ಸಂಘಕ್ಕೆ ವಿಮಲ್ ಫೌಂಡೇಶನ್ ವತಿಯಿಂದ ಉಚಿತ ಅಂಬುಲೆನ್ಸ್ ಸಮರ್ಪಿಸಿ, ಸೇವೆಗೆ ಬುಧವಾರ ಬೆಳಗ್ಗೆ ಚಾಲನೆ ನೀಡಿದ್ದಾರೆ.
ಉಚಿತವಾಗಿ ಚಾಲನೆ ನೀಡಿರುವ ಅಂಬುಲೆನ್ಸ್ ದಿನದ 24 ಗಂಟೆಗಳ ಕಾಲ ಸೇವೆ ಸಲ್ಲಿಸಲಿದೆ.‌ ತುರ್ತು ಸೇವೆಗಾಗಿ ಅಂಬುಲೆನ್ಸ್  ಬೇಕಾದಲ್ಲಿ ರಮೇಶ್ ಪಾಟೀಲ್ ಅವರ ಮೊಬೈಲ್ ಸಂಖ್ಯೆ 9448578501 ಹಾಗೂ ಸಂತೋಷ್ ಪೆಟ್ನೆಕರ್ ಅವರ ಮೊಬೈಲ್ ಸಂಖ್ಯೆ 9986225003ಗೆ ಕರೆ ಮಾಡುವಂತೆ ಕಿರಣ ಜಾಧವ ಅವರು ನಗರದ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.‌
ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಗಣೇಶ್  ನಂದಗಡಕರ್, ರಾಜನ್ ಜಾಧವ್, ರಮೇಶ್ ಪಾಟೀಲ್, ಸಂತೋಷ  ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button