Latest

29 ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಂಪುಟ ರಚನೆಯಾಗಿದ್ದು, ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಮಧ್ಯಾಹ್ನ 2:15ಕ್ಕೆ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಚಿವರಿಗೆ ಪ್ರಮಾಣವಚನ ಭೋದಿಸಿದರು. ಶಾಸಕರಾದ ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಬಿ.ಶ್ರೀರಾಮುಲು, ವಿ.ಸೋಮಣ್ಣ, ಉಮೇಶ್ ಕತ್ತಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

Home add -Advt

ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಶಶಿಕಲಾ ಜೊಲ್ಲೆ ದೆಹಲಿಯಿಂದ ಬರುವ ವಿಮಾನ ವಿಳಂಬವಾಗಿದ್ದರಿಂದ ವಿಮಾನ ನಿಲ್ದಾಣದಿಂದ ಜೀರೋ ಟ್ರಾಫಿಕ್ ಮೂಲಕ ರಾಜಭವನ ತಲುಪಿದ ನಂತರ ಪ್ರಮಾಣವಚನ ಸ್ವೀಕರಿಸಿದರು.

ನೂತನ ಸಚಿವರ ಪಟ್ಟಿ:

೧- ಗೋವಿಂದ ಕಾರಜೋಳ

೨- ಕೆ ಎಸ್ ಈಶ್ವರಪ್ಪ

೩ -ಆರ್ ಅಶೋಕ್

೪-ಡಾ ಅಶ್ವಥ್ ನಾರಾಯಣ

೫-ಬಿ ಶ್ರೀರಾಮುಲು

೬-ವಿ ಸೋಮಣ್ಣ

೭- ಜೆ ಸಿ ಮಾಧುಸ್ವಾಮಿ

೮ – ಸಿ ಸಿ ಪಾಟೀಲ್

೯- ಪ್ರಭು ಚವಾಣ

೧೦- ಆನಂದ್ ಸಿಂಗ್

೧೧-ಕೆ. ಗೋಪಾಲಯ್ಯ

೧೨ ಬೈರತಿ ಬಸವರಾಜ

೧೩- ಎಸ್ ಟಿ ಸೋಮಶೇಖರ

೧೪- ಬಿ ಸಿ ಪಾಟೀಲ್

೧೫-ಕೆ ಸುಧಾಕರ್

೧೬ ಕೆ ಸಿ ನಾರಾಯಣಗೌಡ

೧೭- ಶಿವರಾಮ ಹೆಬ್ಬಾರ್

೧೮- ಉಮೇಶ್ ಕತ್ತಿ

೧೯ ಎಸ್ ಅಂಗಾರಾ

೨೦ ಮುರುಗೇಶ್ ನಿರಾಣಿ

೨೧ -ಎಂ ಟಿ ಬಿ ನಾಗರಾಜ

೨೨- ಕೋಟ ಶ್ರೀನಿವಾಸ ಪೂಜಾರಿ

೨೩- ಶಶಿಕಲಾ ಜೊಲ್ಲೆ

೨೪- ವಿ ಸುನಿಲ್ ಕುಮಾರ್

೨೫- ಹಾಲಪ್ಪ ಆಚಾರ್

೨೬- ಅರಗ ಜ್ಞಾನೇಂದ್ರ

೨೭ ಶಂಕರ್ ಪಾಟೀಲ್ ಮುನೇನಕೊಪ್ಪ

೨೮ ಬಿ ಸಿ ನಾಗೇಶ್

೨೯ ಮುನಿರತ್ನ

ಪ್ರಗತಿವಾಹಿನಿಯಲ್ಲಿ ಪ್ರಮಾಣವಚನ ನೇರ ಪ್ರಸಾರ; ಈ ಲಿಂಕ್ ಕ್ಲಿಕ್ ಮಾಡಿ

ನಿರ್ಧಾರದಿಂದ ಹಿಂದೆ ಸರಿದ ಆನಂದ ಮಾಮನಿ

Related Articles

Back to top button