ಪ್ರಗತಿವಾಹಿನಿ ಸುದ್ದಿ; ನವದೆಹಲಿ: ದೇಶದ ವಿವಿಧ ವಿವಿಐಪಿಗಳ ರಕ್ಷಣೆಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಇದೇ ಮೊದಲ ಬಾರಿಗೆ ಮಹಿಳಾ ಸಿಬ್ಬಂದಿಗಳನ್ನು ನೇಮಕ ಮಾಡಲಿದೆ.
ಈ ನಿಟ್ಟಿನಲ್ಲಿ 33 ಮಹಿಳಾ ಸಿಬಂದಿಗಳ ಮೊದಲ ಬ್ಯಾಚ್ 10 ವಾರಗಳ ತರಬೇತಿ ಶೀಘ್ರದಲ್ಲಿ ಆರಂಭವಾಗಲಿದೆ. ಗೃಹ ಸಚಿವಾಲಯದಿಂದ ಅನುಮೋದನೆ ಪಡೆದು ಈಗಾಗಲೇ ಆಯ್ಕೆ ಪ್ರಕ್ರಿಯೆ ಕೂಡ ನಡೆದಿದೆ. ಸಿಆರ್ ಪಿಎಫ್ ನಿಂದ ಮಹಿಳಾ ಸಿಬ್ಬಂದಿಯ ಬಲವನ್ನು ಹೆಚ್ಚಿಸುವ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಆರಂಭದಲ್ಲಿ 6 ಪ್ಲಟೂನ್ ಮಹಿಳಾ ಸಿಬ್ಬಂದಿಯನ್ನು ಇದಕ್ಕಾಗಿ ಸಿದ್ಧತೆ ಮಾಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಮುಂಬರು ಚುನಾವಣೆ ದೃಷಿಯಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ವಿವಿಐಪಿಗಳಿಗೆ ಭದ್ರತೆ ನಿದುವ ಮಹಿಳಾ ಸಿಆರ್ ಪಿಎಫ್ ಸಿಬ್ಬಂದಿಗಳು ಎಕೆ-47 ಗಳಂತಹ ದಾಳಿ ರೈಫಲ್ ಗಳಿಗೆ ಫೈರಿಂಗ್ ತರಬೇತಿ ಪಡೆಯುತ್ತಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ